ಜಿಲ್ಲೆ

12 ವರ್ಷಗಳಿಂದ ಗೌರವಯುತವಾಗಿ ಬದುಕಿದರೂ ರೌಡಿ ಪಟ್ಟಿಯಿಂದ ಹೆಸರು ತೆಗೆದಯದ ಪೊಲೀಸರು; ಹೈಕೋರ್ಟ್​ನಿಂದ ಆದೇಶ

Mandara

ಬೆಂಗಳೂರು: 12 ವರ್ಷಗಳಿಂದ ಕುಟುಂಬದ ಜತೆ ಗೌರವಯುತವಾಗಿ ಜೀವಿಸುತ್ತಿದ್ದರೂ ರೌಡಿ ಪಟ್ಟಿಯಿಂದ ಕೈಬಿಡದ ಪೊಲೀಸರ ನಡವಳಿಕೆಗೆ ಬೇಸರ ವ್ಯಕ್ತಪಡಿಸಿದ ಹೈಕೋರ್ಟ್, ಕೂಡಲೇ ಆ ವ್ಯಕ್ತಿಯನ್ನು ರೌಡಿ ಪಟ್ಟಿಯಿಂದ ತೆಗೆಯುವಂತೆ ಆದೇಶಿಸಿದೆ. ತಮ್ಮ ಹೆಸರನ್ನು ರೌಡಿ ಪಟ್ಟಿಯಿಂದ ತೆಗೆಯಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಬಂಟ್ವಾಳ ನಿವಾಸಿ ರವಿರಾಜ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಆರ್. ದೇವದಾಸ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಕಕ್ಷಿದಾರರು ಧಾರ್ವಿುಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸಕ್ರಿಯರಾಗಿದ್ದರು. ರಾಜಕೀಯ ದುರುದ್ದೇಶದಿಂದ ಅವರ ಮೇಲೆ ಆರೋಪ ಹೊರಿಸಿ ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದರು. ರವಿರಾಜ್ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳಲ್ಲೂ ನಿದೋಷಿ ಎಂದು ತೀರ್ಪು ಬಂದಿವೆ. ಆದರೂ ರೌಡಿ ಪಟ್ಟಿಯಲ್ಲಿ ರವಿರಾಜ್ ಹೆಸರು ಉಳಿಸಲಾಗಿದೆ ಎಂದರು. ವಾದ ಮಾನ್ಯ ಮಾಡಿದ ಪೀಠ, ರವಿರಾಜ್ ಹೆಸರನ್ನು ರೌಡಿಪಟ್ಟಿಯನ್ನು ತೆಗೆಯುವಂತೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಿಗೆ ನಿರ್ದೇಶಿಸಿತು.