ಜಿಲ್ಲೆ

ದತ್ತ ಸನ್ನಿಧಿಯಲ್ಲಿ ಪುಡಿ ರೌಡಿಯ ಅಟ್ಟಹಾಸ

ರಮೇಶ ಮೇಳಕುಂದಾ

ಕಲಬುರಗಿ: ಅಫಜಲಪುರ ತಾಲೂಕಿನ ಪವಿತ್ರ ತಾಣ ಸುಕ್ಷೇತ್ರ ದೇವಲಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದ ಭೀಮಾ ಅಮರ್ಜಾ ಸಂಗಮ ಕ್ಷೇತ್ರದಲ್ಲಿ ಪುಡಿ ರೌಡಿಯೊಬ್ಬ ಭಕ್ತರ ಮೇಲೆ ಅಟ್ಟಹಾಸ ಮೆರೆದಿದ ದುರ್ಘಟನೆ ನಡೆದಿದೆ.

ದತ್ತ‌ ಚರಿತ್ರೆ ಪಾರಾಯಣಕ್ಕೆ ಕೂತ ಸಮಯದಲ್ಲೇ ಭಕ್ತರ ತಲೆ ಮೇಲೆ ಕಾಲಿಟ್ಟು, ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದು, ಭಕ್ತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ ಹೊಡಿ ಬಡಿ ಮಾಡಿ ಅಟ್ಟಹಾಸ ಮೆರೆದಿದ್ದಾನೆ. ಪಾರಾಯಣಕ್ಕೆ ಕುಳಿತಿದ್ದ ವ್ಯಕ್ತಿಯ ತಲೆ ಮೇಲೆ ಕಾಲಿಟ್ಟು, ಧರ್ಪ ಮೆರೆದಿದ್ದಾನೆ.

ಕಳೆದ ಕೆಲ ವರ್ಷಗಳಿಂದ ಭಕ್ತರಿಗೆ ಕಿರುಕುಳ ನೀಡ್ತಿರೋ ಯಲ್ಲಪ್ಪನ ವಿರುದ್ಧ ನಲವತ್ತಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದರು ಪೊಲೀಸರು ಕ್ರಮ ಕೈಗೊಳ್ಳದೇ ಇರುವುದರಿಂದ ಈತನ ಪುಂಡಾಟ ಎಲ್ಲೆ ಮೀರಿದೆ.

ಪುಡಿ ರೌಡಿಯ ವಿರುದ್ಧ ಕ್ರಮ ಕೈಗೊಳ್ಳದ ಗಾಣಗಾಪುರ ಪೊಲೀಸರ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ, ಸಿಎಂ ಸೇರಿದಂತೆ ಗಣ್ಯಾತೀಗಣ್ಯರು ಭೇಟಿ ನೀಡುವ ಈ ದೇವಸ್ಥಾನಕ್ಕೆ ದೇಶದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ‌.

ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.