ಗುರುಪುರ: ಚೆನ್ನೈಯಲ್ಲಿ ಭಾನುವಾರ ನಡೆದ ರೋವರ್ಸ್ ರಾಷ್ಟ್ರೀಯ ಅಥ್ಲೆಟಿಕ್ ಕೂಟದಲ್ಲಿ 9 ವರ್ಷದ ವಯೋಮಿತಿಯ 50 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ, 100 ಮೀ. ಓಟದಲ್ಲಿ ಕಂಚಿನ ಪದಕ ಗಳಿಸಿರುವ ಅನ್ಶ್ ಕೆ.ಪಕ್ಕಳ ಪೆರ್ಮಂಕಿಗುತ್ತು ದುಬೈಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯಮಟ್ಟದ ಅಥ್ಲೆಟಿಕ್ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳೂರು ಅಶೋಕನಗರದ ಎಸ್.ಡಿ.ಎಂ. ಸ್ಕೂಲ್‌ನಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿರುವ ಅವರು ದಿನೇಶ್ ಕುಂದರ್ ಅವರಿಂದ ಅಥ್ಲೆಟಿಕ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದು, ಪೆರ್ಮಂಕಿಗುತ್ತು ಕಿರಣ್ ಪಕ್ಕಳ, ಮೂಲ್ಕಿ ಪಂಜಿನಡ್ಕ ದಾಕ್ಷಾಯಿಣಿ ಕೆ.ಪಕ್ಕಳ ದಂಪತಿಯ ಪುತ್ರ.