ಜಿಲ್ಲೆ

ರಾಜ್ಯಮಟ್ಟಕ್ಕೆ ರೋವರ್ಸ್ ಬಾಸ್ಕೆಟ್‌ಬಾಲ್ ಕ್ಲಬ್ ತಂಡ

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ನಿಂದ ನಗರದ ರೋವರ್ಸ್ ಕ್ಲಬ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಯುತ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ರೋವರ್ಸ್ ಕ್ಲಬ್‌ನ ಬಾಲಕ- ಬಾಲಕಿಯರ ತಂಡಗಳು ಚಾಂಪಿಯನ್ ಆದವು. ಎರಡೂ ತಂಡಗಳು ಸೆ. 26ರಿಂದ ನಡೆಯುವ ರಾಜ್ಯ ಮಟ್ಟದ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದವು. ರೌಂಡ್ ರಾಬಿನ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ರೋವರ್ಸ್ ಕ್ಲಬ್ ಬಾಲಕರ ತಂಡ ಇನ್ ಸ್ಪೈರ್ ಬಾಸ್ಕೆಟ್‌ಬಾಲ್ ಕ್ಲಬ್ ಅನ್ನು ಮಣಿಸಿತು. ಅದೇರೀತಿ ಬಾಲಕಿಯರ ತಂಡ ಮಲ್ಲಸಜ್ಜನ ಬಾಸ್ಕೆಟ್‌ಬಾಲ್ ಕ್ಲಬ್ ತಂಡವನ್ನು ಸೋಲಿಸಿತು.