ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಗೆ ರೋಟರಿ ಜಿಲ್ಲಾ ಪ್ರಾಂತಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 598 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ರ‌್ಯಾಂಕ್‌ಗಳಿಸಿರುವ ತಾಲೂಕಿನ ಭಾರತ್ ಮಾತಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಂ.ಎ.ತೇಜಸ್ವಿನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಕ್ರಂ ದತ್ತ, ಆನಂದ್, ಜೆ.ಎಸ್.ನಾಗರಾಜ್, ಬಿ.ಎಸ್.ಪ್ರಸನ್ನ ಕುಮಾರ್, ಎಂ.ಬಿ ಸಂಪತ್, ಎಂ.ಎ.ತೇಜಸ್ವಿನಿ ಪಾಲಕರಾದ ಆನಂದ್ ಮತ್ತು ಸುಜಾತಾ ಇದ್ದರು. 
ಜಿಲ್ಲೆ

ರೋಟರಿ ಸೇವಾ ಕಾರ್ಯಕ್ರಮಗಳು ಇತರರಿಗೆ ಸ್ಫೂರ್ತಿ

ಲೋಕೇಶ್ ಮನು. ಡಿ

ಪಿರಿಯಾಪಟ್ಟಣ: ರೋಟರಿ ಸಂಸ್ಥೆಯ ಸೇವಾ ಕಾರ್ಯಕ್ರಮಗಳು ಇತರರಿಗೆ ಸ್ಫೂರ್ತಿ ನೀಡುತ್ತವೆ ಎಂದು ರೋಟರಿ ಸಂಸ್ಥೆ ಜಿಲ್ಲಾ ಪ್ರಾಂತಪಾಲ ವಿಕ್ರಂದತ್ತ ಅಭಿಪ್ರಾಯಪಟ್ಟರು.

ಪಿರಿಯಾಪಟ್ಟಣ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಗೆ ಜಿಲ್ಲಾ ಪ್ರಾಂತಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ನಿಸ್ವಾರ್ಥ ಮನೋಭಾವದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ರೋಟರಿ ಆಯೋಜಿಸುವ ಕಾರ್ಯಕ್ರಮಗಳು ತನ್ನದೇ ಆದ ಛಾಪನ್ನು ಮೂಡಿಸುತ್ತಿವೆ. ಮನುಕುಲದ ಏಳಿಗೆಗೆ ಶ್ರಮಿಸುತ್ತಿದೆ. ವೃತ್ತಿಪರರನ್ನು ಗುರುತಿಸಿ ಅಭಿನಂದಿಸುವ ಕಾರ್ಯಕ್ರಮಗಳು ನಿಸ್ವಾರ್ಥವಾದ ಸೇವೆಯ ಪ್ರತೀಕವಾಗಿದೆ ಎಂದರು.

ಕಲಿಕೆಗೆ ಯಾವುದೇ ಮಿತಿ ಇರುವುದಿಲ್ಲ. ಉತ್ತಮ ಪರಿಶ್ರಮದೊಂದಿಗೆ ಜ್ಞಾನಾರ್ಜನೆ ಪಡೆದಲ್ಲಿ ವಿದ್ಯೆಯೆಂಬ ಅಮೂಲ್ಯ ಸಂಪತ್ತನ್ನು ಯಾರಿಂದಲೂ ಅಪಹರಿಸಲಾಗದು. ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸರ್ಕಾರಿ ಶಾಲೆಗಳನ್ನು ರೋಟರಿ ಸಂಸ್ಥೆಯಿಂದ ದತ್ತು ಪಡೆದು ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದು ಸಲಹೆ ನೀಡಿದರು.

ರೋಟರಿ ವಲಯ 6ರ ಸಹಾಯಕ ಪ್ರಾಂತಪಾಲ ಆನಂದ್ ಮಾತನಾಡಿ, ರೋಟರಿ ಸದಸ್ಯರು ನಮಗೆ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮನೋಭಾವವನ್ನು ಹೊಂದಬೇಕಿದೆ. ರೋಟರಿಯಲ್ಲಿ ಪ್ರತಿಯೊಬ್ಬ ಪದಾಧಿಕಾರಿ ತಮಗೆ ಸಿಕ್ಕ ಅವಕಾಶವನ್ನು ಸಮಾಜದಲ್ಲಿ ಗುರುತಿಸುವಂತಹ ಕೆಲಸಗಳನ್ನು ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಬೇಕಿದೆ ಎಂದರು.

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 598 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ರ‌್ಯಾಂಕ್ ಗಳಿಸಿರುವ ತಾಲೂಕಿನ ಭಾರತ್ ಮಾತಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಂ.ಎ.ತೇಜಸ್ವಿನಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಐಕಾನ್ಸ್ ಸಂಸ್ಥೆ ಅಧ್ಯಕ್ಷ ಜೆ.ಎಸ್.ನಾಗರಾಜ್, ಕಾರ್ಯದರ್ಶಿ ಬಿ.ಎಸ್.ಪ್ರಸನ್ನ ಕುಮಾರ್ ಮಾತನಾಡಿದರು.

ಪಿರಿಯಾಪಟ್ಟಣ ರೋಟರಿ ಐಕಾನ್ಸ್‌ನ ಮಾಜಿ ಅಧ್ಯಕ್ಷ ಕೆ.ರಮೇಶ್, ನಿಯೋಜಿತ ಅಧ್ಯಕ್ಷ ಎಂ.ಬಿ.ಸಂಪತ್, ನಿಯೋಜಿತ ಕಾರ್ಯದರ್ಶಿ ಸತೀಶ್ ಅರಾಧ್ಯ, ಖಜಾಂಚಿ ಬಿ.ಆರ್.ಗಣೇಶ್, ಪದಾಧಿಕಾರಿಗಳಾದ ಸಿ.ಎನ್.ವಿಜಯ್, ರವಿಚಂದ್ರ, ಧನಂಜಯ್, ಡಿ.ರಮೇಶ್, ಪ್ರೀತಿ ಅರಸ್, ಶಿಲ್ಪಾ, ರಮ್ಯಾ, ದಿಲೀಪ್ ಕುಮಾರ್, ಬಿ.ವಿ.ಅನಿತಾ, ವೆಂಕಟೇಶ್, ಎನ್.ಕರುಣಾಕರ್, ವಿ.ಎಸ್.ರಮೇಶ್, ಪಿ.ಎಸ್.ಹರೀಶ್, ಡಾ.ಶರತ್ ಇತರರು ಇದ್ದರು.