ಗದಗ ಸ್ಪಂದನ ಕಿವುಡ ಹಾಗೂ ಮೂಖ ಮಕ್ಕಳ ಶಾಲೆಯಲ್ಲಿ ರೋಟರಿ ಸೆಂಟ್ರಲ್​ ಕ್ಲಬ್​ ವತಿಯಿಂದ ವಿಶ್ವ ಶ್ರವಣ ದಿನ ಹಾಗೂ ಪುಟ್ಟರಾಜ ಕವಿ ಗವಾಯಿಗಳವರ ಸ್ಮರಣೆ ಕಾರ್ಯಕ್ರಮ ಜರುಗಿತು. ವಿಜಯಕುಮಾರ ಹಿರೇಮಠ, ಚಂದ್ರಮ್ಮ ಕೊಟಗಿ, ಎಸ್​. ಎ್​. ದ್ಯಾಪನಗೌಡ್ರ, ಸೋಮಶೇಖರ ಚಿಕ್ಕಮಠ, ವಿದ್ಯಾಶ್ರೀ ಪೂಜಾರ, ಸವಿತಾ ಗಚ್ಚಮ್ಮನವರ, ಪ್ರಭಾವತಿ ಮೆಣಸಿನಕಾಯಿ ಇತರರು ಇದ್ದರು. 
ಜಿಲ್ಲೆ

ಶ್ರವಣ ದೋಷ ಮಕ್ಕಳಿಗೆ ಬೇಕು ಪ್ರೋತ್ಸಾಹ: ಗುಡಿಮನಿ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಶ್ರವಣ ಎಂದರೆ ಕೇಳು, ಮನನ ಮಾಡಿಕೊಳ್ಳುವದು. ಆದರೆ ಕೆಲವು ಮುಗ್ಧ ಮಕ್ಕಳು ಬಾಲ್ಯದಲ್ಲಿಯೇ ಕೇಳುವ ಮಾತನಾಡುವ ಸಾಮರ್ಥ್ಯ ಕಳೆದುಕೊಂಡು ಮೌನಿಗಳಾಗುತ್ತಾರೆ. ಇಂತಹ ಮಕ್ಕಳಿಗೆ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಿಗೆ ಸ್ಪೂತಿರ್ ತುಂಬಬೇಕು ಎಂದು ರೋಟರಿ ಕ್ಲಬ್​ ಅಸಿಸ್ಟಂಟ್​ ಗೌರ್ನರ್​ ಶರಣಬಸಪ್ಪ ಗುಡಿಮನಿ ಹೇಳಿದರು.
ಗದಗ ರೋಟರಿ ಸೆಂಟ್ರಲ್​ ಕ್ಲಬ್​ದಿಂದ ಸ್ಪಂದನ ಕಿವುಡ ಹಾಗೂ ಮೂಕ ಮಕ್ಕಳ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಶ್ರವಣ ದಿನ ಹಾಗೂ ಪುಟ್ಟರಾಜ ಕವಿ ಗವಾಯಿಗಳವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯದಲ್ಲಿ ಆಟಪಾಠಗಳನ್ನು ಮಿತ್ರರೊಡನೆ ಕಳೆಯಬೇಕು. ಈ ಮಕ್ಕಳು ಯಾವುದೇ ತಪ್ಪು ಮಾಡದೇ ಇಂತಹ ನೋವು ಅನುಭವಿಸಬೇಕಾಗುತ್ತದೆ, ನಾವು ಇಂತಹ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.
ಕ್ಲಬ್​ ಅಧ್ಯ ವಿಜಯಕುಮಾರ ಹಿರೇಮಠ ಮಾತನಾಡಿ, ಶ್ರವಣ ಹಾಗೂ ಮಾತಿನ ವಿಕಲತೆ ಇರುವ ಮಕ್ಕಳನ್ನು ಸ್ವಾವಲಂಭಿಗಳನ್ನಾಗಿ ಮಾಡಲು ನಾವು ಶ್ರಮಿಸಬೇಕು ಎಂದರು.
ಕ್ಲಬ್​ ಕಾರ್ಯದಶಿರ್ ಸಂತೋಷ ತೋಟಗಂಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿ ಇಂತಹ ಮಕ್ಕಳು ಸಮಾಜದಲ್ಲಿ ಪ್ರತಿನಿತ್ಯ ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸುತ್ತಾರೆ. ವೈಜ್ಞಾನಿಕವಾಗಿ ಈ ಮಕ್ಕಳಿಗೆ ಸೌಲಭ್ಯ ಒದಗಿಸುವ ಕಾರ್ಯ ನಡೆಯಬೇಕಿದೆ ಎಂದರು.
ದೀಪಾ ಮಸಾಳೆ, ಪೂಜಾ ದೊಡ್ಡಮನಿ, ಕವಿತಾ ದಂಡಿನ, ಲಲಿತಾ ಪಾಟೀಲ, ಚಂದ್ರಮ್ಮ ಕೊಟಗಿ, ಎಸ್​. ಎ್​. ದ್ಯಾಪನಗೌಡ್ರ, ಸೋಮಶೇಖರ ಚಿಕ್ಕಮಠ, ವಿದ್ಯಾಶ್ರೀ ಪೂಜಾರ, ಸವಿತಾ ಗಚ್ಚಮ್ಮನವರ, ಪ್ರಭಾವತಿ ಮೆಣಸಿನಕಾಯಿ ಇತರರು ಇದ್ದರು.