ಜಿಲ್ಲೆ

ರೋಟರಿಯಿಂದ ಶಿಕ್ಷಕರಿಗೆ ಗೌರವ

ಮಡಿಕೇರಿ:

ರೋಟರಿ ಮಡಿಕೇರಿ ವತಿಯಿಂದ ನೇಷನ್ ಬಿಲ್ಡರ್ ಅವಾರ್ಡ್ ಗೌರವವನ್ನು ಸಂತ ಜೋಸೆಫರ ಶಾಲಾ ಶಿಕ್ಷಕಿ ಗರ್ಟೂಡ್ ಟಿ.ಜಿ., ಕೊಡಗು ವಿದ್ಯಾಲಯದ ಪೊನ್ನಮ್ಮ ಪಿ. ಎಸ್ ಹಾಗೂ ಚೆಂಬು ಸರ್ಕಾರಿ ಶಾಲೆಯ ಕಾಮಾಕ್ಷಿ ಪಿ.ಎಸ್, ಅವರಿಗೆ ರೋಟರಿ ಸಭಾ ಭವನದಲ್ಲಿ ಪ್ರದಾನ ಮಾಡಲಾಯಿತು.

ಉತ್ತಮ ಸಮಾಜ ನಿರ್ಮಾಣದ ಗುರಿಯೇ ಧ್ಯೇಯ ಎಂಬ ಮಾತುಗಳನ್ನು ಸನ್ಮಾನ ಸ್ವೀಕರಿಸಿದ ಶಿಕ್ಷಕಿಯರು ಈ ಸಂದರ್ಭದಲ್ಲಿ ಅನಿಸಿಕೆ ಹಂಚಿಕೊಂಡರು.


ರೋಟರಿ ಅಧ್ಯಕ್ಷೆ ಗೀತಾ ಗಿರೀಶ್, ಕಾರ್ಯದರ್ಶಿ ಶರತ್ ಎಂ. ಕೆ., ರೋಟರಿ ಪದಾಧಿಕಾರಿಗಳು, ಸದಸ್ಯರು, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ರೈ, ಕಾರ್ಯದರ್ಶಿ ರತ್ನಾಕರ ರೈ , ಮಡಿಕೇರಿ ರೋಟರಿ ವುಡ್ಸ್ ಕಾರ್ಯದರ್ಶಿ ಹರೀಶ್ ಕಿಗ್ಗಾಲು, ಇನ್ನರ್ ವೀಲ್ ಸದಸ್ಯೆಯರು ಮತ್ತಿತರರು ಇದ್ದರು.