ಜಿಲ್ಲೆ

ರೋಟರಿ ಕ್ಲಬ್ ವತಿಯಿಂದ ಶ್ರಮದಾನ

ಕಿರಣ್ ಗೌಡ.ಜಿ

ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ವತಿಯಿಂದ ಬುಧವಾರ ಸ್ವಚ್ಛ ಕೊಡಗು ಅಭಿಯಾನದ ಪ್ರಯುಕ್ತ ಶ್ರಮದಾನ ಕಾರ್ಯಕ್ರಮ ನಡೆಯಿತು.

ರೋಟರಿ ಕ್ಲಬ್ ಸದಸ್ಯರು ಗ್ರಾಮದ ಗಿರಿಜನರ ಹಾಡಿಯಿಂದ ಮೊರಾರ್ಜಿ ವಸತಿ ಶಾಲಾ ಮುಂಭಾಗ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಮುಂಭಾಗದವರೆಗೂ ಗಿಡಗಂಟಿಗಳನ್ನು ಕಡಿದು ಮತ್ತು ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಿದರು.

ಶ್ರಮದಾನದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಕಿರಣ್, ರೋಟರಿ ವಲಯ ಸೇನಾನಿ ಎ.ಎಸ್.ರಾಮಣ್ಣ, ಸದಸ್ಯರಾದ ತಮ್ಮಯ್ಯ, ಎಂ.ಇ.ವೆಂಕಟೇಶ್ ವಿಠಲ್, ಪ್ರಸನ್ನಕುಮಾರ್, ವೆಂಕಟೇಶ್, ವಿಜಯ್, ಉದಯ್‌ಕುಮಾರ್, ಸತೀಶ್‌ಕುಮಾರ್ ಇದ್ದರು.