ಜಿಲ್ಲೆ

ಯುವತಿಯರು ಆರೋಗ್ಯದ ಮಾಹಿತಿ ಅರಿಯಿರಿ

ರಮೇಶ ಮೇಳಕುಂದಾ

ಹುಮನಾಬಾದ್: ಪ್ರೌಢದಿಂದ ಹದಿಹರೆಯದ ವಯಸ್ಸಿನ ಯುವತಿಯರು ಭಯಪಡದೆ ಆರೋಗ್ಯದ ಬಗ್ಗೆ ಸಮಗ್ರ ಮಾಹಿತಿ ಅರಿತುಕೊಂಡು ಪಾಲನೆ ಮಾಡಬೇಕೆಂದು ಹಿರಿಯ ಮಹಿಳಾ ವೈದ್ಯೆ ಡಾ.ಸಂಗೀತಾ ಅಗಡಿ ಕರೆ ನೀಡಿದರು.

ಪಟ್ಟಣದ ಸರ್ವೋದಯ ಪದವಿ ಕಾಲೇಜಿನಲ್ಲಿ ಶುಕ್ರವಾರ  ರೋಟರಿ ಕ್ಲಬ್ ಹುಮನಾಬಾದ್ ಎಲೈಟ್ ಹಾಗೂ ಸ್ಥಳೀಯ ಐಎಮ್ ಎ ಘಟಕದ ಆಶ್ರಯದಲ್ಲಿ ಏರ್ಪಡಿಸಿದ ಯುವತಿಯರಿಗಾಗಿ ಆರೋಗ್ಯ  ಹಾಗೂ ಸ್ವಚ್ಚತೆ ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೌಢದಿಂದ ಹದಿಹರೆಯದ ವಯಸ್ಸಿನ ಯುವತಿಯರ ಆರೋಗ್ಯದಲ್ಲಿ ಕೆಲವು ಪ್ರಕ್ರೀಯೇ ನಡೆಯುವುದು ಸಹಜ. ಇದರಿಂದ ಯಾವುದೇ ರೀತಿ ಆತಂಕ, ಖಿನ್ನತೆಗೆ ಒಳಗಾಗದೆ ವೈದ್ಯರಿಂದ ಮಾಹಿತಿ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಮಹಿಳಾ ವೈದ್ಯರಾದ ಡಾ.ಸುಜಾತ ಹಾರಕೂಡ, ಡಾ.ಜಯಶ್ರೀ ಕಡ್ಯಾಳೆ,ಡಾ.ಶೈಲಾಜಾ ರಘೋಜಿ ಅವರು  ಆರೋಗ್ಯ ರಕ್ಷಣೆ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಯುವತಿಯರಿಗೆ ಮಾಹಿತಿ ಒದಗಿಸಿದರು. ಅಧ್ಯಕ್ಷತೆ ಕ್ಲಬ್ ಅಧ್ಯಕ್ಷ ನಾಗರಾಜ ಕರ್ಪೂರ ವಹಿಸಿ ರೋಟರಿ ಕ್ಲಬ್ ನ ಕಾರ್ಯವ್ಯಾಪ್ತಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಲ್ಲಪ್ಪ ಕರ್ಪೂರ, ಡಾ.ಶೆಶಿಕಾಂತ ಹಾರಕೂಡ, ಕ್ಲಬ್ ಜಿಲ್ಲಾ ಗೌವರ್ನರ್ ವಿ.ಸತೀಶ ಬಾಬು, ಜಿಲ್ಲಾ

ಕಾರ್ಯದರ್ಶಿ ಶಿವಕುಮಾರ ಯಾಲಾಲ್, ನಿತೀನ್‌ಕರ್ಪೂರ, ಕಾಲೇಜಿನ ಮುಖ್ಯಸ್ಥರಾದ ಪ್ರಜ್ಬಲ್ ಯಲಾಲ್, ಶಾಂತವೀರ ಯಲಾಲ್ ಸೇರಿದಂತೆ ಮತ್ತಿತರರು ಇದ್ದರು. ಕ್ಲಬ್ ಕಾರ್ಯದರ್ಶಿ ಅಭಿಷೇಕ ಚಿದ್ರಿ ಸ್ವಾಗತಿಸಿದರು. ಖಜಾಂಚಿ ಗೌತಮ್ ಕಾಂಬಳೆ ನಿರೂಪಿಸಿದರು.