ಭಾಲ್ಕಿ: ರೋಟರಿ ಕ್ಲಬ್ ಸಾಮಾಜಿಕ ಸೇವೆ ಸ್ಮರಣೀಯವಾಗಿದೆ ಎಂದು ಎಎಸ್‌ಪಿ ಪೃಥ್ವಿಕ್ ಶಂಕರ ಅಭಿಪ್ರಾಯಪಟ್ಟರು.
ಪುರಭವನದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ರೋಟರಿ ಕ್ಲಬ್ ಆಫ್ ಭಾಲ್ಕಿ ಮಾಂಜರಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವದಲ್ಲೇ ಸಂಘಟನಾತ್ಮಕ ಚಟುವಟಿಕೆಗಳೊಂದಿಗೆ ರೋಟರಿ ಕ್ಲಬ್‌ನವರು ಸಾಮಾಜಿಕ ಕಾರ್ಯಗಳನ್ನು ಶಿಸ್ತುಬದ್ಧವಾಗಿ ಮಾಡುತ್ತಿದ್ದಾರೆ. ತಾಲೂಕಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಜತೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ರೋಟರಿ ಕ್ಲಬ್ ಜಿಲ್ಲಾ ಮಾಜಿ ಕನ್ವೀನರ್ ವೊಮಿನ್ನಾ ಸತೀಶಬಾಬು ಮಾತನಾಡಿ, ರೋಟರಿ ಕ್ಲಬ್ ಸಂಸ್ಥಾಪನೆಯಲ್ಲಿ ಹಲವು ಮಜಲುಗಳಿವೆ. ಎಲ್ಲವೂ ರೋಟರಿಯನ್ ಸದಸ್ಯರು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸಾಮಾಜಿಕ ಸೇವೆಯೇ ನಮ್ಮ ಮೂಲ ಗುರಿಯಾಗಿರಬೇಕು ಎಂದು ಹೇಳಿದರು.
ಜಿಲ್ಲಾ ಮಾಜಿ ಕನ್ವೀನರ್ ವೊಮಿನ್ನಾ ಸತೀಶಬಾಬು, ಕಲ್ಯಾಣ ಜೋನ್ ಸಹಾಯಕ ಕನ್ವೀನರ್ ಡಾ.ವಸಂತ ಪವಾರ್ ಮಾತನಾಡಿದರು.
ಪ್ರಮುಖರಾದ ಅಕ್ಷಯ ಮುದ್ದಾ, ಚಂದ್ರಕಾAತ ಎನ್.ಸಿ., ಪ್ರೊ.ರಾಜಕುಮಾರ ಹೊಸದೊಡ್ಡೆ, ಡಾ.ಪ್ರಭುಲಿಂಗ ಸ್ವಾಮಿ, ವಿಜಯಕುಮಾರ ಹುಣಸನಾಳೆ, ಯಶವಂತ ಭೋಸಲೆ, ಶ್ರೀನಾಥ ಹೆಡೆ, ಪ್ರಭುಲಿಂಗ ತುಗಾವೆ, ನ್ಯಾಯವಾದಿ ಶಿವಕುಮಾರ ಕೆರೂರ, ಡಾ.ಗಿರಿಧರ ತಿವಾರಿ, ಡಾ.ಸಂಗಶೆಟ್ಟಿ ಕಲ್ಯಾಣೆ, ಪ್ರೊ.ಜೈಕಾಂತ ಗಂಗೋಜಿ, ಡಾ.ಮಲ್ಲಿಕಾರ್ಜುನ ಎಮ್ಮೆ, ರಾಜಕುಮಾರ ಮಾಶೆಟ್ಟೆ, ಜ್ಯೋತಿ ಎಮ್ಮೆ, ನಿರ್ಮಲಾ ತಿವಾರಿ, ನಿರ್ಮಲಾ ಮಹಾಗಾವ, ನಿರ್ಮಲಾ ಹೆಡೆ, ಸವಿತಾ ಪಾಟೀಲ್, ಚಿನ್ನಪ್ಪರೆಡ್ಡಿ ಭುಜುತಿ, ಶಿವಶಂಕರ ಕಾಮಶೆಟ್ಟಿ, ರವೀಂದ್ರ ಮೂಲಗೆ, ಶಿವಕುಮಾರ ಯಲಾಲ್, ಹಾವಶೆಟ್ಟಿ ಪಾಟೀಲ್, ಶ್ರೀರಾಮ ಮೂರ್ತಿ, ಮುನಿಗಿರೀಶ ಕೊನಿಡಾಲಾ, ವಿಜಯಲಕ್ಷಿ ಗಂಗೋಜಿ ಇತರರಿದ್ದರು.
ರೋಟರಿ ಕ್ಲಬ್ ಆಫ್ ಭಾಲ್ಕಿ ಮಾಂಜರಾ ನೂತನ ಅಧ್ಯಕ್ಷ ಚಂದ್ರಶೇಖರ ಎಮ್ಮೆ ಸ್ವಾಗತಿಸಿದರು. ಕಾರ್ಯಾದರ್ಶಿ ಜಗದೀಶ ಖಂಡ್ರೆ ವಂದಿಸಿದರು. ಡಾ.ಸ್ನೇಹಾ ಎಮ್ಮೆ ನಿರೂಪಣೆ ಮಾಡಿದರು.