ಜಿಲ್ಲೆ

ರೋಟರಿ ಕ್ಲಬ್ ಪದಗ್ರಹಣ

Dharwada - Basavaraj Idli

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜೂನ್ 30ರಂದು ಸಂಜೆ 6.30ಕ್ಕೆ ವಿದ್ಯಾನಗರ ಬಿವಿಬಿ ಕ್ಯಾಂಪಸ್‌ನ ಬಯೋಟೆಕ್ನಾಲಜಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಕ್ಲಬ್ ಅಧ್ಯಕ್ಷರಾಗಿ ಬಾಪು ಬಿರಾದರ, ಕಾರ್ಯದರ್ಶಿ ಎ.ವಿ. ಸಂಕನೂರು, ಖಜಾಂಚಿ ಈಶ್ವರ ಗುಳಗಣ್ಣವರ ಆಯ್ಕೆಯಾಗಿದ್ದು, ಅಧಿಕಾರ ವಹಿಸಿಕೊಳ್ಳುವರು.

ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾಗಿರುವ ಅರುಣ ಭಂಡಾರಿ ಅವರು ಪ್ರತಿಜ್ಞಾವಿಧಿ ಬೋಧಿಸುವರು. ಸಹಾಯಕ ಗವರ್ನರ್ ಶಂಕರ ಹಿರೇಮಠ ಪಾಲ್ಗೊಳ್ಳುವರು ಎಂದು ಪಬ್ಲಿಕ್ ಇಮೇಜ್ ಚೇರ್ಮನ್ ಮಂಜುನಾಥ ಹೊಂಬಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.