ಜಿಲ್ಲೆ

ಉದ್ಯಾನ ಹಸ್ತಾಂತರಕ್ಕೆ ಸಿದ್ಧ

Dharwada - Basavaraj Idli

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಆಶ್ರಯದಲ್ಲಿ ನಿಸರ್ಗ ನಗರ ಅರಣ್ಯ ಮತ್ತು ಉದ್ಯಾನವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಕಾರ್ಯಕ್ರಮ ಇಲ್ಲಿಯ ತೋಳನಕೆರೆ ಹತ್ತಿರದ ಅಕ್ಷಯ ಕಾಲನಿ ನಿಸರ್ಗ ನಗರ ಉದ್ಯಾನದಲ್ಲಿ ಸೆ. 9ರಂದು ಬೆಳಗ್ಗೆ 9.30ಕ್ಕೆ ಆಯೋಜಿಸಲಾಗಿದೆ.

ಮೇಯರ್ ವೀಣಾ ಬರದ್ವಾಡ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅತಿಥಿಗಳಾಗಿ ಪಾಲ್ಗೊಳ್ಳುವರು.

ರೋಟರಿ ಕ್ಲಬ್ ಅಧ್ಯಕ್ಷ ಅರವಿಂದ ಕುಬಸದ, ಕಾರ್ಯದಶಿರ್ ವಸಂತ ಭಸ್ಮೆ, ಸಮುದಾಯ ಸೇವೆ ನಿರ್ದೇಶಕ ಸುರೇಂದ್ರ ಪೋರವಾಲ್, ಕಾರ್ಯಕ್ರಮ ಚೇರ್ಮನ್ ಬಿ.ಬಿ. ಪಾಟೀಲ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.