ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿ ಗಂಗೊಳ್ಳಿ ಆಶ್ರಯದಲ್ಲಿ ಪಿಎಂ ಪೋಷಣ್ ಅಭಿಯಾನ್ ಕಾರ್ಯಕ್ರಮದಡಿ ತಾಯಂದಿರ ಕೈತುತ್ತು ಕಾರ್ಯಕ್ರಮ ಶನಿವಾರ ಶಾಲೆಯಲ್ಲಿ ನಡೆಯಿತು.
ಎಸ್‌ಡಿಎಂಸಿ ಅಧ್ಯಕ್ಷೆ ಶೋಭಾ ಖಾರ್ವಿ, ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷೆ ಚಂದ್ರಕಲಾ ತಾಂಡೇಲ, ದಾಕುಹಿತ್ಲು ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಫರ್ನಾಂಡಿಸ್, ಎಸ್‌ಡಿಎಂಸಿ ಸದಸ್ಯರು, ರೋಟರಿ ಸದಸ್ಯರು, ಪಾಲಕರು ಮೊದಲಾದವರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ವತಿಯಿಂದ ಲಕ್ಕಿ ಮದರ್ ಬಹುಮಾನ ವಿತರಿಸಲಾಯಿತು. 45 ತಾಯಂದಿರು ತಮ್ಮ ಮಕ್ಕಳಿಗೆ ಇಷ್ಟವಾದ ವಿಶಿಷ್ಟ ತಿನಿಸು ತಯಾರಿಸಿ ತಂದು ತಮ್ಮ ಮಕ್ಕಳಿಗೆ ಉಣಬಡಿಸಿದರು.