ಜಿಲ್ಲೆ

ರೋಟರಿಯಿಂದ ನಾನಾ ಸಮಾಜಮುಖಿ ಸೇವೆ

ಚಿತ್ರದುರ್ಗ: ಯಾವುದೇ ಪ್ರತಿಫಲ ನಿರೀಕ್ಷಿಸದೆ ರೋಟರಿ ಕ್ಲಬ್ ಸಮಾಜದ ಒಳಿತಿಗೆ ಸೇವೆ ಸಲ್ಲಿಸುತ್ತಿದೆ ಎಂದು ರೋಟರಿಯನ್ ಎಂ.ಕೆ. ರವೀಂದ್ರ ಹೇಳಿದರು.

ನಗರದ ಎಸ್‌ಆರ್‌ಬಿಎಂಎಸ್ ರೋಟರಿ ಭಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2025-2026ನೇ ಸಾಲಿನ ರೋಟ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಸ್ನೇಹ ಮತ್ತು ಸೇವೆ ಎಂಬ ಘೋಷಣೆಯೊಂದಿಗೆ ಈ ಅಂತಾರಾಷ್ಟ್ರೀಯ ಸಂಸ್ಥೆ ವಿಶ್ವದಾದ್ಯಂತ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರ ಹಾಗೂ ಪರಿಸರ ರಕ್ಷಣೆಗೆ ಮಹತ್ತರವಾದ ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದರು.

ಪೋಲಿಯೋ ನಿರ್ಮೂಲನೆಯಲ್ಲಿ ತನ್ನದೇ ಆದ ಪಾತ್ರ ವಹಿಸಿದೆ. ಇಂಥ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗುವುದು ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ದೊರೆತ ಒಂದು ಅವಕಾಶವಾಗಿದೆ ಎಂದರು.

ಕ್ಲಬ್ ನೂತನ ಅಧ್ಯಕ್ಷೆ ಭಾಗ್ಯಲಕ್ಷ್ಮೀಮೂರ್ತಿ, ಕಾರ್ಯದರ್ಶಿ ಅನುರಾಧಾ ವಿಶ್ವನಾಥ ಹಾಗೂ ಇತರೆ ಪದಾಧಿಕಾರಿಗಳು ಪದಗ್ರಹಣ ಮಾಡಿದರು.

ಕೆ. ಮಧುಪ್ರಸಾದ್, ಶಂಭುಲಿಂಗಪ್ಪ, ಕಿರಣ್‌ಕುಮಾರ್, ವೇದಾರವೀಂದ್ರ, ಉಮೇಶ್‌ತುಪ್ಪದ್, ವೀರಣ್ಣ, ಅನುರಾಧಾ ವಿಶ್ವನಾಥ್, ಮಧು ಕೊಠಾರಿ, ಯೋಗೀಶ್ ಸಹ್ಯಾದ್ರಿ, ಮಾಧುರಿ ಮಧುಪ್ರಸಾದ್ ಇತರರು ಇದ್ದರು.

ಈ ಸಂದರ್ಭದಲ್ಲಿ ಕ್ಲಬ್‌ನ ಬುಲೆಟಿನ್ ಬಿಡುಗಡೆ ಮಾಡಲಾಯಿತು ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.