ಮಾಂಜರಿ: ಸಮಾಜದ ಧನಾತ್ಮಕ ಚಿಂತನೆ ಮಾಡಲು ಸಮಾಜಮುಖಿ ಬೆಳವಣಿಗೆ ಹೊಂದುವ ಜತೆಗೆ ವ್ಯಕ್ತಿತ್ವ ಬೆಳೆಸಿಕೊಳ್ಳಲು ರೋಟ್ರಾಕ್ಟ್ ಕ್ಲಬ್ನಿಂದ ದೊರೆತಿರುವ ಅವಕಾಶ ಉಪಯೋಗಿಸಿಕೊಳ್ಳಬೇಕು ಎಂದು ಬೆಳಗಾವಿಯ ರೋಟ್ರಾಕ್ಟ್ ಕ್ಲಬ್ ಸಂಯೋಜಕ ಹರ್ಷ ಶಿಂಧೆ ಹೇಳಿದರು.
ಅಂಕಲಿ ಗ್ರಾಮದಲ್ಲಿರುವ ಕೆಎಲ್ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಬಿಸಿಎ ಮತ್ತು ಬಿಬಿಎ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಪರಿಸರ ಸಾಮಾಜಿಕ ಮತ್ತು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗುವ ಕಾರ್ಯ ಮಾಡಲು ಇದೊಂದು ಸದಾವಕಾಶ ಎಂದರು.
ಪ್ರಾಂಶುಪಾಲ ಎಂ.ಎಸ್.ಕಾನಡೆ ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಲು ಭಾಗವಹಿಸಬೇಕು ಎಂದರು.
ರೊಟ್ರಾಕ್ಟ್ ಕ್ಲಬ್ ಅಧ್ಯಕ್ಷ ಶ್ರೀಧರ ಗಜಣ್ಣವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿಗಳಾಗಿ ನೇಹಾ ಕೊಠಿವಾಲೆ ಮತ್ತು ಅಭಿನಯಾ ಕಿತ್ತೂರೆ ಆಯ್ಕೆಯಾಗಿ ಪದಗ್ರಹಣ ಮಾಡಿದರು. ರಾಹುಲ್ ಪಾಟೀಲ ನಿರೂಪಿಸಿದರು.