ಜಿಲ್ಲೆ

ಜನಮನ ರಂಜಿಸಿದ ರಾಸ್ ದಾಂಡಿಯಾ

ಹುಬ್ಬಳ್ಳಿ: ವರ್ಲ್ಡ್ ಸ್ಕೈರ್ ಫೌಂಡೇಷನ್ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಕರ್ನಾಟಕ ಜಿಮ್ಖಾನ ಅಸೋಸಿಯೇಷನ್ ಮೈದಾನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಸ್ ದಾಂಡಿಯಾ ಜನಮನ ಪುಳಕಗೊಳ್ಳುವಂತೆ ಮಾಡಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಧರ್ಮ ಜಾಗೃತವಾದರೆ ದೇಶ ಬಲಿಷ್ಠವಾಗಿ ಉಳಿಯುತ್ತದೆ. ದೇಶ ಕಟ್ಟುವ ಕೆಲಸದಲ್ಲಿ ನಾವೆಲ್ಲರೂ ತೊಡಗೋಣ. ಜಗನ್ಮಾತೆ ತಮಗೆಲ್ಲರಿಗೂ ಆಶೀರ್ವಾದ ಮಾಡಲಿ ಎಂದು ಶುಭ ಹಾರೈಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅಂಬಾಭವಾನಿಯು ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಸಂಹರಿಸುವ ಪೌರಾಣಿಕ ಹಿನ್ನೆಲೆಯುಳ್ಳ ದಿನವೇ ದಸರಾ ಹಬ್ಬ. ಧರ್ಮ ರಕ್ಷಣೆಗಾಗಿ ಎಲ್ಲರೂ ಒಂದಾಗಿರೋಣ ಎಂದರು.
ಇದೇ ವೇಳೆ ವರ್ಲ್ಡ್ ಸ್ಕೈರ್‌ನ ನೂತನ ಪ್ರಾಜೆಕ್ಟ್ ಗದಗ ರಸ್ತೆಗೆ ಹೊಂದಿರುವ 27 ಎಕರೆಯ ಸಮೃದ್ಧಿ ಪಾರ್ಕ್ ಬೋರ್ಡ್ ಅನ್ನು ಅನಾವರಣಗೊಳಿಸಲಾಯಿತು.
ರಾಸ್ ದಾಂಡಿಯಾ ಉಸ್ತುವಾರಿಯನ್ನು ವರ್ಲ್ಡ್ ಸ್ವೈರ್ ಪಾಲುದಾರರಾದ ಯೋಗೇಶ ಹಬೀಬ, ಹರ್ಷ ಶ್ರೀಧರ, ಮಂಜುನಾಥ ರತನ, ಸಾಯಿ ದಲಬಂಜನ, ದೇವು ಭಾಂಡಗೆ, ಪ್ರತೀಕ ಹಬೀಬ ವಹಿಸಿಕೊಂಡಿದ್ದರು.
ಮೇಯರ್ ರಾಮಪ್ಪ ಬಡಿಗೇರ, ಸದಸ್ಯ ರಾಜಣ್ಣ ಕೊರವಿ, ಗೋವಿಂದ ಜೋಶಿ, ಲಿಂಗರಾಜ ಪಾಟೀಲ, ಅಶೋಕ ಹಬೀಬ, ಸತೀಶ ಮೆಹರವಾಡೆ, ಭಾಸ್ಕರ ಜಿತೂರಿ, ನೀಲಕಂಠ ಜಡಿ, ಬಾಳು ಮಗಜಿಕೊಂಡಿ, ರಂಗಾ ಬದ್ಧಿ, ವಸಂತ ಲದವಾ, ಡಿ.ಕೆ. ಚವ್ಹಾಣ, ನಾಗೇಶ ಕಲಬುರ್ಗಿ, ಕೆ.ಪಿ. ಪೂಜಾರಿ, ಎನ್.ಎನ್. ಖೋಡೆ, ಶ್ರೀಕಾಂತ ಹಬೀಬ, ಟಿ.ವಿ. ಪೂಜಾರಿ ಇತರರು ಉಪಸ್ಥಿತರಿದ್ದರು.