ಜಿಲ್ಲೆ

ಜೆ.ಪಿ.ಭವನದಲ್ಲಿ ಕೊಠಡಿಗೆ ಪೂಜೆ; ಕುಮಾರಸ್ವಾಮಿ ಆರೋಗ್ಯಕ್ಕೆ ಪ್ರಾರ್ಥನೆ

ಬೆಂಗಳೂರು: ಜೆ.ಪಿ.ಭವನದಲ್ಲಿ ತಮಗೆ ನೀಡಿರುವ ಕೊಠಡಿಗೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ವಿಶೇಷ ಪೂಜೆ ನೆರವೇರಿಸಿದರು. ಇದೇ ವೇಳೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಗ್ಯ ಚೇತರಿಕೆಗೆ ಸಂಕಲ್ಪ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಾಜಿ ಶಾಸಕ ವೈ.ಎಸ್.ವಿ.ದತ್ತ ಉಪಸ್ಥಿತರಿದ್ದರು.

ಗಣೇಶನಿಗೆ ಕ್ಷೀರಾಭಿಷೇಕ

ಅನಾರೋಗ್ಯಕ್ಕೆ ಒಳಗಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಬೇಗ ಗುಣಮುಖರಾಗಲೆಂದು ದೊಡ್ಡ ಗಣೇಶನಿಗೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಗಣೇಶನಿಗೆ ಕ್ಷೀರಾಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.