ಶಾಲೆ-ಕಾಲೇಜು ಆರಂಭೋತ್ಸವ ಹಿನ್ನೆಲೆಯಲ್ಲಿ ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಪ್ರೌಢಶಾಲೆ ಮತ್ತು ಪ.ಪೂ. ಕಾಲೇಜಿನ ವರ್ಗ ಕೊಠಡಿಗಳನ್ನು ಸ್ವಚ್ಛಗೊಳಿಸಲಾಯಿತು. 
ಜಿಲ್ಲೆ

ಶಾಲೆ-ಕಾಲೇಜು ಪ್ರಾರಂಭೋತ್ಸವಕ್ಕೆ ಕೊಠಡಿ ಸ್ವಚ್ಛತೆ

ದತ್ತಾತ್ರೇಯ ಪಿ ಕುಲಕರ್ಣಿ

ಮಹಾಲಿಂಗಪುರ: ಶಾಲೆ, ಕಾಲೇಜು ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆ ಮತ್ತು ಪಪೂ ಕಾಲೇಜಿನ ಎಲ್ಲ ವರ್ಗ ಕೊಠಡಿಗಳನ್ನು ತೊಳೆದು ಶುಚಿಗೊಳಿಸಲಾಯಿತು.

ಕೆಎಲ್‌ಇ ಪ್ರೌಢಶಾಲೆ ಮತ್ತು ಪ.ಪೂ.ಕಾಲೇಜಿನಲ್ಲಿ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮೇ 29 ರಂದು ಪ್ರೌಢಶಾಲೆ ಹಾಗೂ ಮೇ 31 ರಂದು ಕಾಲೇಜು ತರಗತಿಗಳು ಆರಂಭವಾಗಲಿವೆ.

ಪ್ರಾಚಾರ್ಯ ಎಲ್.ಬಿ.ತುಪ್ಪದ, ಉಪಪ್ರಾಂಶುಪಾಲ ಬಿ.ಎನ್.ಅರಕೇರಿ ಮಾರ್ಗದರ್ಶನದಲ್ಲಿ ಸಿಪಾಯಿಗಳಾದ ಶಂಕರ ಕಲ್ಲೋಳಿ, ರಾಮು ಮಾದರ, ರವಿ ಲಕ್ಕನಗೋಳ ಅವರು 11 ಕೊಠಡಿಗಳನ್ನು ಶುಚಿಗೊಳಿಸಿ ವಿದ್ಯಾರ್ಥಿಗಳ ಆಗಮನಕ್ಕೆ ಸಜ್ಜುಗೊಳಿಸಿದರು.