ಜಿಲ್ಲೆ

ತಮಿಳುನಾಡು ಬೈಕ್ ಮೇಲೆ ರೊಮ್ಯಾನ್ಸ್

 ವಿಜಯವಾಣಿ ಸುದ್ದಿಜಾಲ ಸರ್ಜಾಪುರ

ಸರ್ಜಾಪುರ ರಸ್ತೆಯಲ್ಲಿ ಗುರುವಾರ ಯುವಕನೊಬ್ಬ ತನ್ನ ಬುಲೆಟ್ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ತಬ್ಬಿಕೊಂಡು ಸಾಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತಮಿಳುನಾಡು ನೋಂದಣಿ ಪ್ಲೇಟ್ ಇರುವ ಬೈಕ್‌ನಲ್ಲಿ ಸಿನಿಮಾ ಸ್ಟೈಲ್ನಲ್ಲಿ ಯುವಕ, ಯುವತಿ ನಡುರಸ್ತೆಯಲ್ಲಿ ರೋಮ್ಯಾನ್ಸ್ ಮಾಡಿಕೊಂಡು ಸಾಗುತ್ತಿರುವ ದೃಶ್ಯ ಸಾಕಷ್ಟು ಸದ್ದು ಮಾಡಿದೆ, ಇದಲ್ಲದೆ ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಾ ಇನ್ನಿತರ ವಾಹನ ಸವಾರರಿಗೆ ಆತಂಕ ಉಂಟು ಮಾಡಿದ್ದಾರೆ, ರಸ್ತೆಯಲ್ಲಿ ತಬ್ಬಿಕೊಂಡು ಚುಂಬಿಸುತ್ತಿರುವ ದೃಶ್ಯಗಳೂ ವೈರಲ್ ಆಗಿದ್ದು, ಸಾರ್ವಜನಿಕವಾಗಿ ಅಂಗಿಕ ಚೇಷ್ಟೆ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರ ವಲಯದಲ್ಲಿ ತೀವ್ರ ಒತ್ತಡ ವ್ಯಕ್ತವಾಗಿದೆ.

ಠಾಣೆಯಲ್ಲಿ ಪ್ರಕರಣ:

ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ವಯಂ ದೂರು ದಾಖಲಿಸಿಕೊಂಡಿರುವ ಸರ್ಜಾಪುರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿಡಿಯೋದಲ್ಲಿ ಬೈಕ್ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣುತ್ತಿದ್ದು ಶೀಘ್ರದಲ್ಲೇ ಬೈಕ್ ಜಪ್ತಿ ಮಾಡಿ ಮುಂದಿನ ಕ್ರಮಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.