ಚಿಕ್ಕಮಗಳೂರಿನ ಬಿ.ಜಿ.ಎಸ್ ಮಂಜುನಾಥೇಶ್ವರ ಶಾಲಾ ಆವರಣದಲ್ಲಿ ಅ. ೫ರಿಂದ ೯ರವರೆಗೆ ನಡೆಯುವ ೪೪ನೇ ರಾಜ್ಯ ಮಟ್ಟದ ಕಬ್ ಮತ್ತು ಬುಲ್ ಬುಲ್ ಉತ್ಸವ-೨೦೨೪ನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಉದ್ಘಾಟಿಸಿದರು. ಎ.ಎನ್.ಮಹೇಶ್, ಸಿ.ಎಂ.ತ್ಯಾಗರಾಜ್, ಫಣಿರಾಜ್ ಮತ್ತಿತರರಿದ್ದರು. 
ಜಿಲ್ಲೆ

ಸಮಾಜ ಕಟ್ಟುವಲ್ಲಿ ಸ್ಕೌಟ್ ಗೈಡ್ಸ್ ಪಾತ್ರ ಮಹತ್ವ

ಚಿಕ್ಕಮಗಳೂರು: ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ ಮತ್ತು ಗೈಡ್ಸ್ನ ಶಿಸ್ತು ಕೌಶಲ್ಯ ಮಹತ್ವದ ಪಾತ್ರ ವಹಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾ ತಿಳಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಂಸ್ಥೆ ವತಿಯಿಂದ ನಗರದ ಬಿ.ಜಿ.ಎಸ್ ಮಂಜುನಾಥೇಶ್ವರ ಶಾಲಾ ಆವರಣದಲ್ಲಿ ಅ. ೫ರಿಂದ ೯ರವರೆಗೆ ನಡೆಯುವ ೪೪ನೇ ರಾಜ್ಯ ಮಟ್ಟದ ಕಬ್ ಮತ್ತು ಬುಲ್ ಬುಲ್ ಉತ್ಸವ-೨೦೨೪ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಕೌಟ್ಸ್ ಚಳವಳಿ ಇದು ವಿಶ್ವ ಖ್ಯಾತಿ ಪಡೆದಿರುವ ಯುವ ಜನಾಂಗದ ಕೂಟ. ಇದರ ಉz್ದೆÃಶವು ಯುವ ಪೀಳಿಗೆಯ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆ ಸಹಕಾರಿಯಾಗಿದೆ. ಸ್ಕೌಟ್ಸ್ ನಿಯಮ ಪ್ರತಿಯೊಬ್ಬರಿಗೂ ಕೈಲಾದ ಮಟ್ಟಿಗೆ ಸಹಾಯ ಮಾಡುವ ಮೌಲ್ಯವನ್ನು ಹೊಂದಿದೆ. ಉತ್ತಮ ಅನುಭವ ಮತ್ತು ತರಬೇತಿ ಪಡೆಯುವ ಅವಕಾಶ ಇಲ್ಲಿದೆ. ೧೯೦೯ರಲ್ಲಿ ಬೆಂಗಳೂರಿನ ಬಿಶಪ್ ಕಾಟನ್‌ಮಿಲ್ ಶಾಲೆಯಲ್ಲಿ ಆರಂಭವಾದ ಸ್ಕೌಟ್ಸ್ಗೆ ಮೈಸೂರಿನ ಜಯಚಮರಾಜೇಂದ್ರ ಒಡೆಯರ್ ನೀಡಿದ ಸಹಕಾರ ಮರೆಯುವಂತ್ತಿಲ್ಲ ಎಂದು ಸ್ಮರಿಸಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಕೃತಿಯಲ್ಲಿ ನಿಂತ ಬೆಟ್ಟ, ಹರಿಯುವ, ನದಿ, ಹಾರುವ ಹಕ್ಕಿ, ಅಲೆದಾಡುವ ಪ್ರಾಣಿಗಳ ಪರಿಸರದ ಮಧ್ಯೆ ಪಸರಿಸಿದ ಅನುಭವನ್ನು ಪ್ರತಿಯೊಬ್ಬರು ಪಡೆಯಬೇಕು. ರಾಜ್ಯದ ವಿವಿಧ ಜಿಲ್ಲೆಗಳಿಂದ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಸುಮಾರು ೭ ಸಾವಿರ ಜನರಿಗೆ ೫ ದಿನಗಳ ಕಾಲ ನಡೆಯುವ ಉತ್ಸವಕ್ಕೆ ಎಲ್ಲ ವ್ಯವಸ್ತೆಯನ್ನು ಉತ್ತಮವಾಗಿ ಮಾಡಿz್ದÉÃವೆ ಎಂದರು.
ಬೆಳಗಾವಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಮಾತನಾಡಿ, ಭೌದ್ಧಿಕ ಜಗತ್ತನ್ನು ಮೀರಿದ ಜೀವನದ ಆಧ್ಯಾತ್ಮಿಕ ಮೌಲ್ಯವನ್ನು ಹುಡುಕುವ ಬದ್ಧತೆಯನ್ನು ವಿದ್ಯಾರ್ಥಿಗಳಿಗೆ ರೂಢಿಸಿಕೊಂಡು ಹಾಗೂ ಶಿಸ್ತು ಕಲಿಯುವ ಒಂದು ಸಾಮಾಜಿಕ ಆಯಾಮ ಇದಾಗಿದೆ. ಸ್ಥಳೀಯ, ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಶಾಂತಿ ಸೌಹಾರ್ದತೆ ಕಲಿಯಲು ಸ್ಕೌಟ್ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಬೌದ್ಧಿಕ ಪ್ರತಿಭೆಯನ್ನು ಬೆಳೆಸಲು ಇದು ಉಪಯುಕ್ತ ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್. ಷಡಕ್ಷರಿ, ರಾಜ್ಯ ಉಪಾಧ್ಯಕ್ಷ ಎ.ಎನ್. ಮಹೇಶ್, ಜಿಲ್ಲಾ ಆಯುಕ್ತ ಫಣಿರಾಜ್, ಮಮತ ಮತ್ತಿತರರಿದ್ದರು.