ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶ ರೋಗ ಮುಕ್ತವಾಗಲು ವೈದ್ಯರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾ ಕ್ಷೇತ್ರದಲ್ಲಿ 2 ದಿನಗಳ ಕಾಲ ಏರ್ಪಡಿಸಿರುವ ಫಿಜಿಯೋಥೆರಪಿ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಜನರು ತ್ವರಿತ ಉಪಶಮನಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ವೈದರ್ಯರಿಗೆ ಇಂಜೆಕ್ಷನ್ ನೀಡಿ, ಶಸ್ತ್ರಚಿಕಿತ್ಸೆ ಮಾಡಿ ಎಂದು ಕೇಳಿಕೊಳ್ಳುತ್ತಾರೆ. ಆದರೆ ಫಿಜಿಯೋಥೆರಪಿ (ಭೌತಿಕ ಚಿಕಿತ್ಸೆ)ಯಿಂದ ನೋವು ನಿವಾರಣೆ ಶಾಶ್ವತವಾಗಿ ಆಗಲಿದೆ ಎಂಬ ತಿಳಿವಳಿಕೆಯನ್ನು ಜನರಿಗೆ ನೀಡುವ ಕೆಲಸವಾಗಬೇಕಿದೆ. ಇದೇ ಕಾರಣಕ್ಕೆ ಫೀಜಿಯೋಥೆರಪಿಸ್ಟ್ಗಳಗೆ ಸಾಕಷ್ಟು ಬೇಡಿಕೆ ಬಂದಿದೆ ಎಂದರು.
ಸೇವೆಯ ಅವಶ್ಯಕತೆ ಇದ್ದಲ್ಲಿ ಕೆಲಸ ನಿರ್ವಹಿಸುವ ಜನ ಇಲ್ಲದಿರುವುದೇ ದೇಶದ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗಳು ಸಾಕಷ್ಟು ದೇಶಗಳಲ್ಲಿವೆ. ಸದ್ಯ ಫಿಜಿಯೋಥೆರಪಿಸ್ಟ್ಗಳಿಗೆ ಬೇಡಿಕೆ ಹೆಚ್ಚಿದೆ. ವಿದ್ಯಾಥಿರ್ಗಳು ಇದರ ಪ್ರಯೋಜನ ಪಡೆಯಬೇಕಲ್ಲದೆ, ಸೇವಾ ಮನೋಭಾವ, ಕೌಶಲ, ಸಾಮರ್ಥ್ಯ ಬೆಳೆಸಿಕೊಂಡು ತಮ್ಮ ಕಾರ್ಯವೈಖರಿಯನ್ನು ಇಂದಿನ ದಿನಮಾನಕ್ಕೆ ತಕ್ಕಂತೆ ಅಪ್ಡೇಟ್ ಮಾಡಿಕೊಳ್ಳಬೇಕು ಎಂದರು.
ಬದಲಾದ ಜೀವನ ಶೈಲಿಯಿಂದ ದೈಹಿಕ ಮತ್ತು ಮಾನಸಿಕ ಒತ್ತಡ ಹೆಚ್ಚಿದೆ. ಇದರ ನಿವಾರಣೆಗೆ ಫಿಜಿಯೋಥೆರಪಿಸ್ಟ್ಗಳ ಮಾರ್ಗದರ್ಶನದಲ್ಲಿ ದೈಹಿಕ ವ್ಯಾಯಾಮ, ಯೋಗ ಮಾಡುವುದು ಅನಿವಾರ್ಯವಾಗಿದೆ. ಇಡೀ ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ ಇನ್ನೂ ಹೆಚ್ಚಿನ ಬದಲಾವಣೆ ಆಗಲಿದೆ ಎಂದರು.
ಡಾ. ಅಲಿ ಇರಾನಿ ಮಾತನಾಡಿ, ದೇಶದಲ್ಲಿ ಫಿಜಿಯೋಥೆರಪಿಸ್ಟ್ಗಳಿಗೆ ಬೇಡಿಕೆ ಹೆಚ್ಚಿದೆ. ವಿದ್ಯಾಥಿರ್ಗಳು ಅವಕಾಶದ ಸದ್ಬಳಕೆ ಮಾಡಿಕೊಳ್ಳಬೇಕಲ್ಲದೆ, ಒಬ್ಬ ಶ್ರೇಷ್ಠ ಫಿಸಿಯೋಗೆ ಇರಬೇಕಾದ ಎಲ್ಲ ಗುಣ ಲಕ್ಷಣ, ಕೌಶಲ ಬೆಳೆಸಿಕೊಳ್ಳಬೇಕು. ದೇಶದಲ್ಲಿ ಈ ಕೋರ್ಸ್ ತರಬೇತಿ ನೀಡುವ ಕಾಲೇಜುಗಳ ಸಂಖ್ಯೆಯಲ್ಲಿ ಸಹ ಗಣನೀಯ ಏರಿಕೆ ಕಂಡಿದ್ದು, ವಿದೇಶಗಳ ಜನರು ಸಹ ಭಾರತಕ್ಕೆ ಆಗಮಿಸಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಡಾ. ಕೆ. ಮಾಧವಿ ಮಾತನಾಡಿ, ಕ್ರೀಡೆ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಫಿಜಿಯೋಥೆರಪಿಸ್ಟ್ಗಳ ಸೇವೆ ಅತೀ ಮುಖ್ಯವಾಗಿದೆ. ಹೀಗಾಗಿ ಪಿಜಿಯೋಥೆರಪಿ ವಿದ್ಯಾಥಿರ್ಗಳು ಕೌಶಲ, ನೈತಿಕ ಮೌಲ್ಯ ಬೆಳೆಸಿಕೊಳ್ಳಬೇಕು. ಇದರಿಂದ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿದೆ ಎಂದರು.
ಸಮ್ಮೇಳನ ಸಂಟನಾ ಕಾರ್ಯದಶಿರ್ ಮಧುಲಿಕಾ ಹೊರಟ್ಟಿ, ಐಎಪಿ ಉಪಾಧ್ಯಕ್ಷ ಸುರೇಶಬಾಬು ರೆಡ್ಡಿ ಮಾತನಾಡಿದರು. ನಂತರ ವಿವಿಧ ಗೋಷ್ಠಿಗಳು ನಡೆದವು.
ಎಸ್ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನಕುಮಾರ, ನಿರ್ದೇಶಕಿ ಪದ್ಮಲತಾ ನಿರಂಜನಕುಮಾರ, ಸಂಟನಾ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ ಅಲಿ, ಡಾ. ದೇವಿದಾಸ ಪಾಟೀಲ, ಡಾ. ಕೌಶಿಕ, ಡಾ. ಶ್ವೇತಾ ಕುಲಕಣಿರ್, ರಾಜ್ಯ, ಹೊರರಾಜ್ಯಗಳ ಪ್ರತಿನಿಧಿಗಳು, ವಿದ್ಯಾಥಿರ್ಗಳು, ಇತರರು ಇದ್ದರು.