ಜಿಲ್ಲೆ

ಏಷ್ಯಾ ಚಾಂಪಿಯನ್‌ಶಿಪ್‌ಗೆ ರೋಹನ್ ಆಯ್ಕೆ: ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿ ಸಾಧನೆ

ಮಂಡ್ಯ: ಶ್ರೀಲಂಕಾದಲ್ಲಿ ಮೇ ತಿಂಗಳಲ್ಲಿ ನಡೆಯಲಿರುವ ಏಷ್ಯಾಮಟ್ಟದ ಗೊಜುರಿಯೋ ಚಾಂಪಿಯನ್‌ಶಿಪ್‌ಗೆ ಮಂಡ್ಯ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ನ ಐದನೇ ತರಗತಿ ವಿದ್ಯಾರ್ಥಿ ವೈ.ಆರ್.ರೋಹನ್ ಆಯ್ಕೆಯಾಗಿದ್ದಾನೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ರಾಜ್ಯಮಟ್ಟದ ಗೊಜುರಿಯೊ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಹಾಗೂ ಫೆ.1ರಂದು ಕೊಯಿಮುತ್ತೂರಿನ ಭಾರತಿ ಯುನಿವರ್ಸಿಟಿ ಒಳ ಕ್ರೀಡಾಂಗಣ ನಡೆದ ಎರಡನೇ ರಾಷ್ಟ್ರೀಯ ಗೊಜೂರಿಯೊ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ ಸ್ವರ್ಣ ಪದಕ ಪಡೆದು ಏಷ್ಯಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

ವಿದ್ಯಾರ್ಥಿಯ ಈ ಸಾಧನೆಯು ರಿಪಬ್ಲಿಕ್ ಶಾಲೆ ಹಾಗೂ ’ಒಕೀ ನವೊ ಗುಡೋ ಕೈ ಮಾರ್ಷಲ್ ಆರ್ಟ್ಸ್’ ಅಕಾಡೆಮಿ ಇಂಡಿಯಾ ಸಂಸ್ಥೆಗೆ ಹೆಮ್ಮೆ ತಂದಿದೆ. ಈತ ಮಂಡ್ಯದ ರವಿಕುಮಾರ್ ಮತ್ತು ಸುಮಿತ್ರಾ ದಂಪತಿ ಮಗ. ಸಾಧನೆ ಮಾಡಿದ ವಿದ್ಯಾರ್ಥಿ ಹಾಗೂ ಕರಾಟೆ ತರಬೇತುದಾರ ಶಿಯಾನ್ ಡಾ.ವಿನಯ್‌ಕುಮಾರ್ ಅವರನ್ನು ಸಂಸ್ಥೆಯ ಕಾರ್ಯದರ್ಶಿ ಮಂಜು, ಆಡಳಿತ ಮಂಡಳಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದೆ.