ಹಟ್ಟಿಚಿನ್ನದ ಗಣಿ ಸಮೀಪದ ರೋಡಲಬಂಡಾ(ತ) ಗ್ರಾಪಂ ಬಂದ್ ಆಗಿರುವುದರಿಂದ ಕರುನಾಡ ವಿಜಯ ಸೇನೆ ಪದಾಧಿಕಾರಿಗಳು ಮನವಿ ಪತ್ರವನ್ನು ಗೋಡೆಗೆ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಪದಾಧಿಕಾರಿಗಳಾದ ವಡಿಕೆಪ್ಪ, ಹಂಪಯ್ಯ, ಶಿವಶಂಕರ, ದಾವಲ್‌ಸಾಬ್ ಇದ್ದರು. 
ಜಿಲ್ಲೆ

ರೋಡಲಬಂಡಾ(ತ) ಗ್ರಾಪಂಗೆ ಬೀಗ

ರುದ್ರಪ್ಪ ವಾಲಿ

ಹಟ್ಟಿಚಿನ್ನದಗಣಿ: ಸಮೀಪದ ರೋಡಲಬಂಡಾ(ತ) ಗ್ರಾಪಂಗೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಕರುನಾಡ ವಿಜಯಸೇನೆ ಸಂಘಟನೆ ತೆರಳಿದಾಗ ಕಚೇರಿಗೆ ಬೀಗ ಹಾಕಿದ್ದರಿಂದ ಮನವಿ ಪತ್ರವನ್ನು ಶನಿವಾರ ಗೋಡೆಗೆ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಯ ಪಾಲನೆ ಮಾಡುತ್ತಿಲ್ಲ. ಸಿಬ್ಬಂದಿ ಬೇಜವಾಬ್ದಾರಿತನದಿಂದ ರೋಡಲಬಂಡಾ(ತ) ಸಂಪೂರ್ಣ ಜಿಡ್ಡುಗಟ್ಟಿದೆ ಎಂದು ಕರುನಾಡ ವಿಜಯಸೇನೆ ತಾಲೂಕು ಉಪಾಧ್ಯಕ್ಷ ರಂಗಪ್ಪ ಭೋವಿ ಹೇಳಿದರು.

ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ನಿರ್ದೇಶಕರನ್ನು ಸಂಘಟನೆ ಮುಖಂಡರು ಸಂಪರ್ಕಿಸಿದಾಗ, ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಇಲ್ಲದಿರುವುದು ಮತ್ತು ಪಂಚಾಯತಿ ಬಾಗಿಲು ಬಂದ್ ಆಗಿರುವುದು ನನಗೆ ಗೊತ್ತಿಲ್ಲ ಎಂದು ತಾಪಂ ಕಾರ್ಯನಿರ್ವಾಹಕ ನಿರ್ದೇಶಕ ಉಮೇಶ ಜಾರಿಕೊಂಡರು ಎಂದು ಅಸಮಾಧಾನ ವ್ಯಕ್ತಪಡಿಸಿದರು.