ಜಿಲ್ಲೆ

ದರೋಡೆ, ದನ ಕಳವು ಗ್ಯಾಂಗ್‌ನ ಐವರ ಸೆರೆ

Dakshina Kannada

ಗುರುಪುರ: ಕರಾವಳಿ ಪ್ರದೇಶದಲ್ಲಿ ದರೋಡೆ ಹಾಗೂ ದನಗಳ ಕಳವು ಮಾಡುತ್ತಿದ್ದ ಕುಖ್ಯಾತ ಗ್ಯಾಂಗ್ ಭೇದಿಸಿದ ಬಜ್ಪೆ ಪೊಲೀಸರು, ಗ್ಯಾಂಗ್‌ನ ಐವರನ್ನು ಬಂಧಿಸಿ, ದನಗಳ ಸಹಿತ ಆರು ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.

ಅಬ್ದುಲ್ ಹಕೀಂ ಅಲಿಯಾಸ್ ಬೊಗ್ಗು(33), ಅಬ್ದುಲ್ ರಜಾಕ್(45), ಮುಹಮ್ಮದ್ ರಫೀಕ್ ಅಲಿಯಾಸ್ ನೌಶಾದ್ ರಫೀಕ್(42), ಮುಹಮ್ಮದ್ ಮನ್ಸೂರ್(29) ಇರ್ಫಾನ್ (31) ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲ ಬಂಟ್ವಾಳ ತಾಲೂಕಿನ ಮೂಲರಪಟ್ಣದ ಗೋರಿಹಿತ್ಲು, ಸುಂಟಿಹಿತ್ಲು ನಿವಾಸಿಗಳಾಗಿದ್ದಾರೆ.

ಜ.29ರಂದು ಬಜ್ಪೆ ಠಾಣಾ ವ್ಯಾಪ್ತಿಯ ಗಂಜಿಮಠ ಇಂಡಸ್ಟ್ರಿಯಲ್ ಪಾರ್ಕ್ ಬಳಿ ಗ್ಯಾಂಗೊಂದು ದರೋಡೆಗೆ ಹೊಂಚು ಹಾಕಿರುವ ಸುಳಿವಿನ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.