ರಾಮನಗರ: ಬೆಂಗಳೂರು - ಮೈಸೂರು ದಶಪಥದಲ್ಲಿ ಕಾರು ನಿಲ್ಲಿಸಿಕೊಂಡಿದ್ದ ವ್ಯಕ್ತಿಗಳನ್ನು ಮಾರಕಾಸ್ತ್ರಗಳಿಂದ ಬೆದರಿಸಿ 9 ಲಕ್ಷರೂ ಮೌಲ್ಯದ ಚಿನ್ನಭಾರಣಗಳನ್ನು ದೋಚಿರುವ ಘಟನೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ಮಾಯಗಾನಹಳ್ಳಿ ಬಳಿ ನಡೆದಿದೆ.
ಬೆಂಗಳೂರಿನ ಕತ್ರಿಗುಪ್ಪೆಯ ಹಿಮಾಚಲಂ ಹಾಗೂ ಅಂಕಯ್ಯ ಅವರು ಚನ್ನಪಟ್ಟಣದ ಪೌಳಿದೊಡ್ಡಿಯ ಸ್ನೇಹಿತರ ಮನೆಯಲ್ಲಿದ್ದ ಕಾರ್ಯಕ್ರಮಕ್ಕೆ ಬಂದು ಡಿ.13ರ ರಾತ್ರಿ ಬೆಂಗಳೂರಿಗೆ ವಾಪಾಸಾಗುತ್ತಿದ್ದರು. ಈ ವೇಳೆ ನಿದ್ರೆ ಮಂಪರು ಬಂದ ಹಿನ್ನೆಲೆಯಲ್ಲಿ ಮಾಯಗಾನಹಳ್ಳಿ ಬಳಿ ಇರುವ ಬ್ರಿಡ್ಜ್ ಕೆಳಗೆ ತಮ್ಮ ಕಾರನ್ನು ನಿಲ್ಲಿಸಿ ಹಿಮಾಚಲಂ ಮುಖ ತೊಳೆದು ಕೊಂಡಿದ್ದಾರೆ.
ಈ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತರು ಲಾಂಗ್‌ಗಳನ್ನು ತೋರಿಸಿ ಇಬ್ಬರ ಮೈ ಮೇಲೆ ಇದ್ದ 166 ಗ್ರಾಂ ತೂಕದ 9.13 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಕಸಿದುಕೊಂಡು ಸ್ಥಳದಿಂದ ಪರಾರಿ ಆಗಿದ್ದಾರೆ. ಈ ಸಂಬಂಧ ಹಿಮಾಚಲಂ ರಾಮನಗರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.