ಜಿಲ್ಲೆ

ಚಿನ್ನದ ಆಸೆ ತೋರಿಸಿ ದರೋಡೆ: ಇಬ್ಬರ ಬಂಧನ

Vijayanagara - Veerendra


ಹೊಸಪೇಟೆ: ಚಿನ್ನದ ಆಸೆ ತೋರಿಸಿ, ನಕಲಿ ಚಿನ್ನವನ್ನು ನೀಡಿ ಹಣವನ್ನು ದೋಚುತ್ತಿದ್ದ ಇಬ್ಬರು ಆರೋಪಿಗಳನ್ನು ಮರಿಯಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಪುರ ತಾಂಡದ ಕವಾಡಿ ರಮೇಶ(೩೫), ಕೊರಚರ ಮಂಜುನಾಥ(೩೮) ಎಂಬುವರನ್ನು ಬಂಧಿಸಲಾಗಿದೆ. ಆರೋಪಿತರಿಂದ ೧೨ ರೂ. ಹಾಗೂ ೨ ಚಾಕುಗಳನ್ನು ವಶ ಪಡಿಸಿಕೊಂಡು, ಆರೋಪಿಗಳನ್ನು ಬಂಧಿಸಿ ನ್ಯಾಯಂಗ ವಶಕ್ಕೆ ಒಪ್ಪಿಸಲಾಗಿದೆ.
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆ ಪಾಲ್ಯಂ ಗ್ರಾಮದ ಬ್ರಹ್ಮರಾಜು ಎಂಬುವರರನ್ನು ಫೋನ್ ಮೂಲಕ ಸಂಪರ್ಕಿಸಿದ್ದ ಆರೋಪಿಗಳು, ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿದ್ದರು. ಅವರ ಮಾತು ನಂಬಿ ಮರಿಯಮ್ಮನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಗುರುವಾರ ಬೆಳಗಿನ ಜಾವ ಬಂದಿದ್ದ ಬ್ರಹ್ಮರಾಜು ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು ಚಾಕು ತೋರಿಸಿ ಬೆದರಿಸಿದ್ದರು. ಅವರಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಕುರಿತು ಬ್ರಹ್ಮರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಮರಿಯಮ್ಮನಹಳ್ಳಿ ಠಾಣೆ ಪೊಲೀಸರು, ಆರೋಪಿತರನ್ನು ಬಂಧಿಸಿದ್ದಾರೆ.