ಹುಬ್ಬಳ್ಳಿ: ಇಲ್ಲಿಯ ಚಂದ್ರಕಲಾ ಟಾಕೀಸ್ ಹತ್ತಿರದ ಚಿಕನ್ ಪೌಲ್ಟ್ರಿ ಅಂಗಡಿಗೆ ನುಗ್ಗಿ ಅಂಗಡಿಯಲ್ಲಿದ್ದ ದೂರುದಾರರಿಗೆ ಚಾಕು ತೋರಿಸಿ ಬೆದರಿಸಿ 5000 ರೂ. ನಗದು ದರೋಡೆ ಮಾಡಿದ್ದ 6 ಜನರನ್ನು ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಹಮ್ಮದ್ ಫಹದ್ ಮಿಠಾಯಿಗಾರ, ಅಯ್ಯು ಬೇಪಾರಿ, ಖಾಜಾ ಬಾಷಾ ಮುಲ್ಲಾ, ಶಿವಾಜಿ ಮದ್ರಾಸಿ, ಮುಬಾರಕ್ ಮಂಚಿನಕೊಪ್ಪ, ಅಬ್ಬು ಮನಿಯಾರ ಬಂಧಿತರು.
ಬಂಧಿತರಿಂದ ಕೃತಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ, ಚಾಕು ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಸುದ್ದಿಗಾರರಿಗೆ ತಿಳಿಸಿದ್ದಾರೆ.