ಜಿಲ್ಲೆ

2.5 ಲಕ್ಷ ರೂ.ಮೌಲ್ಯದ ಚಿನ್ನ ಕಳ್ಳತನ, ಮೊಮ್ಮಗನ ಮೇಲೆ ಅಜ್ಜಿ ದೂರು

Udupi

ಉಡುಪಿ: ಮಲ್ಪೆ ಬಾಬುತೋಟ ಕೊಡವೂರು ಪದ್ಮಾಶ್ರಮ ಸರ್ವೇಶ್ವರಿ ದೇವಸ್ಥಾನದ ಹತ್ತಿರದಲ್ಲಿ ವಾಸವಾಗಿರುವ ಮಹಿಳೆಯೊಬ್ಬರು ಕಪಾಟಿನಲ್ಲಿಟ್ಟಿದ್ದ ಚಿನ್ನವನ್ನು ಮೊಮ್ಮಗ ಹಾಗೂ ಆತನ ಗೆಳೆಯರು ಕಳ್ಳತನ ಮಾಡಿದ್ದಾರೆ ಎಂದು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನ.1ರಂದು ಜಾನಕಿ ಎಂಬುವರು ಪಡುಕೆರೆಯಲ್ಲಿ ಕಾರ್ಯಕ್ರಮಕ್ಕೆ 4 ಚಿನ್ನದ ಬಳೆ, ಎರಡು ಸರ ಹಾಕಿಕೊಂಡು ಹೋಗಿ ಕಾರ್ಯಕ್ರಮ ಮುಗಿಸಿ ಸಾಯಂಕಾಲ ಮನೆಗೆ ಬಂದು ರೂಮಿನ ಒಳಗಡೆ ಕಪಾಟಿನಲ್ಲಿ ಇಟ್ಟಿದ್ದರು. ನ. 7ರಂದು ಕಟೀಲು ದೇವಸ್ಥಾನಕ್ಕೆ ಹೋಗುವ ಸಮಯದಲ್ಲಿ ಕಪಾಟು ತೆರೆದಾಗ ಚಿನ್ನ ಇರಲಿಲ್ಲ. ಮನೆಯವರಲ್ಲಿ ವಿಚಾರಿದಾಗಲೂ ನಕಾರಾತ್ಮಕ ಉತ್ತರ ಲಭಿಸಿದ್ದು, ಒಟ್ಟು 56 ಗ್ರಾಂ 2.50 ಲಕ್ಷ ರೂ. ಅಂದಾಜು ಮೌಲ್ಯದ ಚಿನ್ನವನ್ನು ಮೊಮ್ಮಗ ಲಿಖಿತ್ ಯಾನೆ ಗುರು ಮತ್ತು ಆತನ ಸ್ನೇಹಿತರು ಕಳ್ಳತನ ಮಾಡಿರುವ ಬಗ್ಗೆ ಸಂಶಯವಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.