ಜಿಲ್ಲೆ

5 ರೈಲ್ವೆ ಓವರ್​ ಬ್ರಿಡ್ಜ್​ಗೆ ಕೇಂದ್ರದ ಗ್ರೀನ್​ ಸಿಗ್ನಲ್​

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಬಹುದಿನಗಳ ಬೇಡಿಕೆಯಾಗಿದ್ದ 5 ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 350 ಕೋ.ರೂ., ಮೊತ್ತದ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಯಾತಸಂದ್ರ-ಮೈದಾಳ ಗೇಟ್​ ನಡುವೆ(ಎಲ್​ಸಿ 35) 57.3ಕೋಟಿ ರೂ., ಬಡ್ಡಿಹಳ್ಳಿ ಗೇಟ್​ ಅಗ್ನಿಶಾಮಕ ಠಾಣೆ ಸಮೀಪ (ಎಲ್​ಸಿ 38) 89.03ಕೋಟಿ ರೂ., ಬಡ್ಡಿಹಳ್ಳಿಗೇಟ್​(ಎಲ್​ಸಿ 39)97.69ಕೋಟಿ ರೂ., ಅರೆಯೂರು ರಸ್ತೆ ಮಲ್ಲಸಂದ್ರಗೇಟ್​(ಎಲ್​ಸಿ 46) 55.99ಕೋಟಿ ರೂ. ಹಾಗೂ ತುಮಕೂರು-ಮೈಸೂರು ರಸ್ತೆಯ ನಿಟ್ಟೂರು ರೈಲ್ವೆ ಸ್ಟೇಷನ್​(ಎಲ್​ಸಿ 58) ಕಾಮಗಾರಿ 50.57ಕೋಟಿ ರೂ. ಸೇರಿ ಒಟ್ಟು 350 ಕೋ.ರೂ., ಕಾಮಗಾರಿಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಮೇಲ್ಸುತುವೆ ಕಾಮಗಾರಿಗಳ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅಗತ್ಯಕ್ರಮ ಕೈಗೊಂಡು ಆದಷ್ಟು ಬೇಗ ಕಾಲಮಿತಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.