ಜಿಲ್ಲೆ

ರೋಟರಿ ಜಿಲ್ಲಾ ಮಟ್ಟದ ರಸಪ್ರಶ್ನಾ ಸ್ಪರ್ಧಾ ಕೂಟ ರೋಟರಿ ಮೈಸೂರು ವಿಜಯನಗರ ಸಂಸ್ಥೆಗೆ ಪ್ರಶಸ್ತಿ

ಹರೀಶ ಎಂ.

ಮಂಗಳೂರು: ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ರೋಟರಿ ಜ್ಞಾನ, ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ರೋಟರಿ ಜಿಲ್ಲಾ ಮಟ್ಟದ 18ನೇ ವಾರ್ಷಿಕ ಅಂತರ ರೋಟರಿ ಕ್ಲಬ್ ರಸಪ್ರಶ್ನಾ ಸ್ಪರ್ಧಾ ಕೂಟ ಶುಕ್ರವಾರ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಜರಗಿತು.


ರೋಟರಿ ಕ್ಲಬ್ ಮೈಸೂರು ವಿಜಯನಗರ ಸಂಸ್ಥೆಯನ್ನು ಪ್ರತಿನಿಧಿಸಿದ ಎಚ್.ಎಂ. ಹರೀಶ್ ರವರು ಪ್ರಥಮ ಸ್ಥಾನ ಪಡೆದು ರೋಟರಿ ಪ್ರತಿಷ್ಠಿತ ಪ್ರಶಸ್ತಿ ಪಡೆದರು. ರೋಟರಿ ಕ್ಲಬ್ ಮಂಗಳೂರು ಬೈಕಂಪಾಡಿ ಸಂಸ್ಥೆಯನ್ನು ಪ್ರತಿನಿಧಿಸಿದ ಸುಬೋದ್ ಕುಮಾರ್ ದಾಸ್ ಮತ್ತು ಕಿರಣ್ ಪ್ರಸಾದ್ ರೈ ತಂಡ ದ್ವಿತೀಯ ಸ್ಥಾನ ಪಡೆದರು.


ರೋಟರಿ ಮಾಜಿ ಜಿಲ್ಲಾ ಗವರ್ನರ್ ರವೀಂದ್ರ ಭಟ್ ಮುಖ್ಯ ಅತಿಥಿಯಾಗಿದ್ದರು. ಸ್ಪರ್ಧಾ ಕೂಟ ವಿಜೇತರಿಗೆ ರೋಟರಿ ಆಕರ್ಷಕ ಪ್ರಶಸ್ತಿ, ಪ್ರಮಾಣ ಪತ್ರ ಮತ್ತು ನಗದು 3,000 ರೂ. ಬಹುಮಾನವನ್ನು ಹಸ್ತಾಂತರಿಸಿ, ಅಭಿನಂದಿಸಿದರು.


ವಲಯ 2ರ ಸಹಾಯಕ ಗವರ್ನರ್ ಸುಬೋದ್ ಕುಮಾರ್ ದಾಸ್ ಸಂಸ್ಥೆಯ ಸಾಪ್ತಾಹಿಕ ವಾರ್ತಾ ಗೃಹ ಪತ್ರಿಕೆ ಸೆಂಟೋರ್ ರನ್ನು ಬಿಡುಗಡೆಗೊಳಿಸಿದರು. ಕ್ಲಬ್‌ನ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರವೀಂದ್ರರವರು ರೋಟರಿ ಅಂತರಾಷ್ಟ್ರೀಯ ಪ್ರತಿಷ್ಠಾನಕ್ಕೆ ಡಾಲರ್ 1,000 (ರೂ.83000) ಯನ್ನು ದೇಣಿಗೆಯಾಗಿ ನೀಡಿದರು. ಅವರ ಪುತ್ರಿ ಶ್ರವ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.


ಮೈಸೂರು, ಮಂಗಳೂರು, ಬೈಕಂಪಾಡಿ, ಪುತ್ತೂರು, ದೇರಳಕಟ್ಟೆ, ಪಣಂಬೂರು, ಮೂಡಬಿದ್ರೆ, ಬಂಟ್ವಾಳ ಜಿಲ್ಲೆಯ 18 ತಂಡಗಳು ಅಂತಿಮ ಮತ್ತು ನಿರ್ಣಾಯಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಜತೆ ಕಾರ್ಯದರ್ಶಿ ರಾಮ್‌ದಾಸ್ ಮಾಸಿಕ ವರದಿ ಮಂಡಿಸಿದರು. ವಲಯ ಪ್ರತಿನಿಧಿ ಸಾಯಿಬಾಬಾ ರಾವ್ ವಂದಿಸಿದರು.