ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶೇಖಮಲೆಯಿಂದ ದರ್ಬೆತ್ತಡ್ಕ ರಸ್ತೆಗೆ ತಿರುವು ಭಾಗದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಬಿರುಕುಬಿಟ್ಟಿದೆ  
ಜಿಲ್ಲೆ

ರಸ್ತೆ ಬದಿ ತಡೆಗೋಡೆ ಬಿರುಕು

ಇಂದಿರಾ ಎನ್ ಕೆ

ಪುತ್ತೂರು ಗ್ರಾಮಾಂತರ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶೇಖಮಲೆಯಿಂದ ದರ್ಬೆತ್ತಡ್ಕ ರಸ್ತೆಗೆ ತಿರುವು ಭಾಗದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಬಿರುಕು ಬಿಟ್ಟಿದ್ದು, ನಿರಂತರವಾಗಿ ಮಳೆ ಸುರಿದಲ್ಲಿ ಕುಸಿಯುವ ಅಪಾಯ ಎದುರಾಗಿದೆ.
ಶೇಖಮಲೆ-ದರ್ಬೆತ್ತಡ್ಕ ರಸ್ತೆ ಅಭಿವೃದ್ಧಿಯ ವೇಳೆ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆಯ ತಳಭಾಗದ ಮಣ್ಣು ಕುಸಿದಿದೆ. ತಡೆಗೋಡೆಯ ಕೆಳಭಾಗದಲ್ಲಿ ಎಸ್.ಪಿ.ಬಶೀರ್ ಎಂಬುವರ ಮನೆ ಹಾಗೂ ಮನೆಗೆ ಹೋಗುವ ದಾರಿ ಇದ್ದು, ಎಡೆಬಿಡದೆ ಮಳೆ ಸುರಿದಲ್ಲಿ ತಡೆಗೋಡೆ ಸಂಪೂರ್ಣವಾಗಿ ಕುಸಿದು ಮನೆಗೆ ಹಾನಿಯಾಗುವ ಭೀತಿ ಎದುರಾಗಿದೆ.