ಸೋಮವಾರಪೇಟೆ: ಪಟ್ಟಣದ ಸಮೀಪ ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲು ಉದ್ದೇಶಿಸಿರುವ 1.5 ಕೋಟಿ. ರೂ.ವೆಚ್ಚದ ಎರಡು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್‌ಗೌಡ ಬುಧವಾರ ಚಾಲನೆ ನೀಡಿದರು.
ಶಾಂತಳ್ಳಿಯಿಂದ ಕುಂದಳ್ಳಿ ಮಾರ್ಗವಾಗಿ ಮಾಗೇರಿ-ಪಟ್ಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ಆಯ್ದ ಭಾಗದಲ್ಲಿ ಅಭಿವೃದ್ಧಿಪಡಿಸುತ್ತಿದ್ದು, ಕುಂದಳ್ಳಿಯಲ್ಲಿ 1 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ರಸ್ತೆ ನಿರ್ಮಾಣಕ್ಕೆ ಸ್ಥಳೀಯರು ಅಗತ್ಯ ಜಾಗವನ್ನು ಬಿಟ್ಟುಕೊಡಬೇಕು ಎಂದು ಮನವಿ ಮಾಡಿದರು.
ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಈ.ಜಯೇಂದ್ರ, ಕುಂದಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್, ಪ್ರಮುಖರಾದ ಪ್ರಸಾದ್, ಲಿಂಗರಾಜು, ಪ್ರದೀಪ್, ಬಿ.ಬಿ. ಸತೀಶ್, ಚೌಡ್ಲು ಚೇತನ್, ಲಾರೆನ್ಸ್, ಕಿರಣ್ ಉದಯಶಂಕರ್, ಎಚ್.ಆರ್.ಸುರೇಶ್, ವಲಯ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಮಧುಕುಮಾರ್, ಎಸ್.ಎ. ಪ್ರತಾಪ್, ಗಿರೀಶ್, ರಾಜಪ್ಪ, ಲೋಕೋಪಯೋಗಿ ಇಲಾಖೆಯ ಎಇಇ ಕುಮಾರ್ ಇದ್ದರು.
ಬಳಿಕ ಬಸವನಕಟ್ಟೆ-ಶಾಂತಳ್ಳಿ ರಸ್ತೆಯ 282 ಮೀಟರ್ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ ಶಾಸಕರು, ಲೋಕೋಪಯೋಗಿ ಇಲಾಖೆಯ 50-50 ಅನುಪಾತದ ಅನುದಾನದಡಿ ಬಸವನಕಟ್ಟೆಯಿಂದ ಶಾಂತಳ್ಳಿ ಮಾರ್ಗದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಪ್ರತಿ ವರ್ಷವು ಈ ಸ್ಥಳದಲ್ಲಿ ರಸ್ತೆ ಗುಂಡಿ ಬಿದ್ದು, ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡು ಸರ್ವಋತು ರಸ್ತೆಯನ್ನಾಗಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.