ಬೆಳಗಾವಿ: ಖಾನಾಪುರ ತಾಲೂಕಿನ ಬಾಳಗುಂದಾ ಗ್ರಾಮದಿಂದ ತಾವರಗಟ್ಟಿ ರೈಲ್ವೆ ಸ್ಪೇಷನ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರದೇಶಾಭಿವೃದ್ಧಿ ನಿಧಿಯಿಂದ ಕೈಗೊಳ್ಳಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಸಹೋದರ ಸುರೇಶ ಜಾಧವ ಹೇಳಿದ್ದಾರೆ. ಬಾಳಗುಂದ ಗ್ರಾಮದಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸಹೋದರಿ ಮತಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಸರ್ಕಾರಿಂದ ಹೆಚ್ಚಿನ ಅನುದಾನ ತಂದು ಮಾದರಿ ಕ್ಷೇತ್ರ ನಿರ್ಮಾಣದ ಪಣತೊಟ್ಟಿದ್ದಾರೆ. ಮತದಾರರು ಸಹಕಾರ ನೀಡಬೇಕು ಎಂದು ಕೋರಿದರು. ಮಧು ಕವಳೆಕರ, ಅರುಣ ಬೆಳಗಾವಕರ್, ಪಾಂಡು ಪಾಟೀಲ, ಮಂಜುನಾಥ ಮರಪ್ಪನ್ವಾರ, ಸಂದೀಪ ದೇಸಾಯಿ, ಮಹಾಂತೇಶ ಕಲ್ಯಾಣಿ, ಗ್ರಾಮಸ್ಥರು ಕಾಯಕರ್ತರು ಇದ್ದರು.