ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಕರಡಿಹಳ್ಳಿ ಭೋವಿ ಕಾಲನಿಯಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಶಿವಲಿಂಗೇಗೌಡ ಭೂಮಿಪೂಜೆ ನೆರವೇರಿಸಿದರು. ಹನುಮಪ್ಪ ಕಲ್ಲೇಶಪ್ಪ, ಕೊಟ್ರೇಶ್, ಶಿವಣ್ಣ, ಯತೀಶ್, ಪದ್ಮನಾಭ, ಹುಲಿಯಪ್ಪ, ರಂಗನಾಥ, ತಿಮ್ಮಪ್ಪ ಇದ್ದರು. 
ಜಿಲ್ಲೆ

ರಸ್ತೆ ಡಾಂಬರೀಕರಣಕ್ಕೆ ಚಾಲನೆ

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿಯ ಕರಡಿಹಳ್ಳಿ ಬೋವಿ ಕಾಲನಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಶಿವಲಿಂಗೇಗೌಡ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಪ.ಜಾತಿ, ಪಂಗಡಗಳ ಜನರು ವಾಸಿಸುತ್ತಿರುವ ಗ್ರಾಮಗಳ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಿದ್ದು, ಮೂಲ ಸೌಕರ್ಯಗಳನ್ನು ಓದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ನಾನು ಶಾಸಕನಾದ ಮೇಲೆ ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ಶಾಲೆ ಹಾಗೂ ದೇವಸ್ಥಾನ ನಿರ್ಮಿಸಿಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಕೆರೆಗಳಿಗೆ ನೀರು ಹರಿಸುವುದಾಗಿ ಮತ್ತು ನೆರೆ ಜಿಲ್ಲೆಯ ಸಂಪರ್ಕ ಸಾಧಿಸಲು ಉತ್ತಮ ರಸ್ತೆ ಮಾಡುವುದರ ಮೂಲಕ ಅಭಿವೃದ್ಧಿ ಪಡಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೊಲ್ಲರಹಳ್ಳಿ ಹನುಮಪ್ಪ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕಲ್ಲೇಶಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಕೊಟ್ರೇಶ್, ಶಿವಣ್ಣ, ಯತೀಶ, ಪದ್ಮನಾಭ, ರಂಗನಾಥ, ತಿಮ್ಮಪ್ಪ, ರಾಮಾಬೋವಿ, ಎಇಇ ಮುನಿರಾಜು, ಗುತ್ತಿಗೆದಾರ ವೆಂಕಟೇಗೌಡ ಇದ್ದರು.