ಜಿಲ್ಲೆ

ರಸ್ತೆ ಸಂಚಾರ ತಡೆದು ಹೋರಾಟ

ಪ್ರಶಾಂತ ಹೂಗಾರ

ಸಂಕೇಶ್ವರ: ಇಲ್ಲಿನ ಪುರಸಭೆಯಿಂದ ಚಿಲ್ಲರೆ ವ್ಯಾಪಾರದ ಲೈಸನ್ಸ್ ಪಡೆದು ದುರುದುಂಡೀಶ್ವರ ಖಾಸಗಿ ತರಕಾರಿ ಪೇಟೆಯಲ್ಲಿ ಸಗಟು ತರಕಾರಿ ವ್ಯಾಪಾರ ಮಾಡುತ್ತಿರುವ ವರ್ತಕರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಒತ್ತಾಯಿಸಿ ಕಮತನೂರು ಕ್ರಾಸ್ ಬಳಿ ರೈತರು ರಸ್ತೆ ತಡೆದು ಧರಣಿ ನಡೆಸಿದರು.

ಧಾರವಾಡ ಹೈಕೋರ್ಟ್ ಪೀಠದಲ್ಲಿ ಸರ್ಕಾರದ ಪರ ನೇಮಿಸಿದ ವಕೀಲರು ಹಾಜರು ಆಗಿರಲಿಲ್ಲ. ಇದರಿಂದ ಖಾಸಗಿ ಮಾರುಕಟ್ಟೆ ಪರವಾಗಿ ಹೈಕೋರ್ಟ್ ತೀರ್ಪು ನೀಡಿದೆ. ರಾಜ್ಯ ಸರ್ಕಾರದ ಪರವಾಗಿ ಸರಿಯಾಗಿ ದಾಖಲೆ ಮಂಡನೆ ಮಾಡದವರ ವಿರುದ್ಧ ಕ್ರಮ ಕೈಕೊಳ್ಳಬೇಕು.

ಕಳೆದ 15 ದಿನಗಳಿಂದ ಎಪಿಎಂಸಿ ಕಾರ್ಯದರ್ಶಿ ಕಚೇರಿಗೆ ಬಂದಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಎಪಿಎಂಸಿ ಜಾಗದಲ್ಲೆ ಅನಧಿಕೃತ ಕಟ್ಟಡ ನಿರ್ಮಿಸಿ ಬಾಡಿಗೆ ಪಡೆಯುತ್ತಿರುವವರ ಮೇಲೆ ಯಾವ ಕ್ರಮ ಕೈಕೊಂಡಿಲ್ಲ. ಈ ಹಿನ್ನಲೆಯಲ್ಲಿ ಸಂಕೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತು ಸಂಕೇಶ್ವರ ಎಪಿಎಂಸಿ ಕಾರ್ಯದರ್ಶಿಗಳ ಕ್ರಮ ಕೈಕೊಳ್ಳಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಸಿಪಿಐ ಶಿವಶಂಕರ ಅವಜಿ ಆಗಮಿಸಿ ಸೂಕ್ತ ಬಂದೋಬಸ್ತ್ ಒದಗಿಸಿದರು. ಪ್ರತಿಭಟನೆಯಿಂದಾಗಿ ನೂರಾರು ವಾಹನಗಳು ರಸ್ತೆಯಲ್ಲೆ ನಿಂತು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಯಿತು.