ಯಾದಗಿರಿಯಲ್ಲಿ ಸುರಕ್ಷತಾ ಬೈಕ್ ಜಾಥಾಗೆ ಚಾಲನೆ
ವಿಜಯವಾಣಿ ಸುದ್ದಿಜಾಲ ಯಾದಗಿರಿ
ಇಂದು ಅನೇಕ ವಾಹನ ಸವಾರರು ರಸ್ತೆ ನಿಯಮ ಪಾಲಿಸುತ್ತಿಲ್ಲ. ಇದು ಒಂದಡೆ ಕಾನೂನು ಉಲ್ಲಂಘನೆಯಾದರೆ, ಇನ್ನೊಂದಡೆ ಜೀವಕ್ಕೆ ಕುತ್ತು ತರಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಹೇಳಿದರು.
ಜಿ¯್ಲÁಡಳಿತ, ಜಿ¯್ಲÁಮಟ್ಟದ ರಸ್ತೆ ಸುರP್ಷÀತಾ ಸಮಿತಿ, ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಗರದ ಪ್ರಾದೇಶಿಕ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಸೇಫ್ಟಿ ಡ್ರೆÊವ್- ಬೈಕ್' ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಾಹನ ಸವಾರರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸದರೆ ಅಪಘಾತ ತಡೆಯಲು ಸಾಧ್ಯ ಎಂದರು.
ನಿತ್ಯ ಸಾವಿರಾರು ಜನರು ಹೆಲ್ಮೇಟ್ ಹಾಕಿಕೊಳ್ಳದೆ ವಾಹನ ಚಲಾಯಿಸುತ್ತಾರೆ. ಅವರಲ್ಲಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಾರೆ. ಇದು ಜೀವ ಕಳೆದುಕೊಂಡ ಕುಟುಂಬಕ್ಕೆ ಆಗುವ ನಷ್ಟ ಹೇಳತೀರದು, ಕಾರಣ ಜೀವಕ್ಕಿಂತ ದೊಡ್ಡದ್ದು ಯಾವುದು ಇಲ್ಲ, ನಿಮ್ಮನ್ನೆ ನಂಬಿ ಒಂದು ಕುಟುಂಬವಿರುತ್ತದೆ. ಆದರೆ ಇದರ ಪರಿವೇ ಇಲ್ಲದೆ ವಾಹನಗಳನ್ನು ನಡೆಸುವ ಮೂಲಕ ಅಮೂಲ್ಯವಾದ ಜೀವವನ್ನೇ ಬಲಿಕೊಡುವವರನ್ನು ನಿತ್ಯ ಕಾಣುತ್ತೇವೆ. ಕಾರಣ ವಾಹನ ಸವಾರರು ಕಡ್ಡಾಯವಾಗಿ ನಿಯಮ ಪಾಲಿಸಬೇಕು ಎಂದು ಕಿವಿ ಮಾತು ಹೇಳಿದರು.
ಜಿ¯್ಲÁ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಮಿಲಿಂದಕುಮಾರ, ಅಭಿಮನ್ಯು ಶ್ರೀಂಗೇರಿ, ಸುನಿಲïಕುಮಾರ ಚಂದರಗಿ, ವೆಂಕಟೇಶ ಹಿರೇನೂರ, ರಾಘವೇಂದ್ರ, ವೀರನಗೌಡ ಸೇರಿ ಇತರರಿದ್ದರು.
ಈ ಬೈಕ್ ಜಾಥಾದಲ್ಲಿ ಹೆಚ್ಚುವರಿ ಜಿ¯್ಲÁಧಿಕಾರಿ ಶರಣಬಸಪ್ಪ ಕೋಟಪ್ಪಗೊಳ ಅವರು ಬೈಕ್ ಓಡಿಸಿ ಗಮನ ಸೆಳೆದರು. ನಗರದ ಪದವಿ ಕಾಲೇಜು, ಸುಭಾಷ್ ಚೌಕ್, ಶಾಸ್ತಿçಜಿ ವೃತ್ತ, ಹೊಸಳ್ಳಿ ಕ್ರಾಸ್, ಗಂಜ್ ವೃತ್ತ, ಮೈಲಾಪುರ ಬೇಸ್, ಚಕ್ಕರ್ ಕಟ್ಟಾ, ಗಾಂಧಿ ವೃತ್ತ, ವೀರಶೈವ ಕಲ್ಯಾಣ ಮಂಟಪ, ಹಿರೇ ಅಗಸಿ, ಕನಕ ಸರ್ಕಲï, ಕಾಡ್ಲೂರ್ ಪೆಟ್ರೋಲï ಬಂಕ್ ಸೇರಿ ನಗರದ ಮುಖ್ಯ ಬೀದಿಗಳಲ್ಲಿ ಜಾಥಾ ನಡೆಯಿತು.