ಜಿಲ್ಲೆ

ಕಳೆದ ಅಪಘಾತ ಪ್ರಮಾಣ ಶೇ.10ರಷ್ಟು ಇಳಿಕೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಪೊಲೀಸ್​ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಸರ್ವೆ ನಡೆಸಿ ಜಿಲ್ಲೆಯ ಬ್ಲಾಕ್​ ಸ್ಪಾಟ್​ಗಳಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ಇದರಿಂದ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಮೊದಲ ಬಾರಿಗೆ 2024ರಲ್ಲಿ ಶೇ.10ರಷ್ಟು ಅಪಘಾತ ಹಾಗೂ ಮರಣ ಪ್ರಮಾಣ ಇಳಿಕೆಯಾಗಿದೆ ಎಂದು ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ.ಕೆ.ಅರುಣ್​ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್​ ಉಡುಪಿ ವಿಭಾಗದ ವತಿಯಿಂದ ಉಡುಪಿ ಲಯನ್ಸ್​ ಕ್ಲಬ್​ ಹಾಗೂ ಮಣಿಪಾಲ ರೋಟರಿ ಕ್ಲಬ್​ ಸಹಯೋಗದೊಂದಿಗೆ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಮ್ಮಿಕೊಳ್ಳಲಾದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ವರ್ಷಕ್ಕೆ ದಾಖಲಾಗುವ ಒಟ್ಟು ಪ್ರಕರಣಗಳಲ್ಲಿ ಶೇ.30ರಷ್ಟು ಅಪಘಾತ ಪ್ರಕರಣಗಳಾಗಿರುತ್ತವೆ. ಇದರಲ್ಲಿ ಪ್ರತಿವರ್ಷ ಸರಾಸರಿ 250 ಮಂದಿ ಸಾವನ್ನಪ್ಪು ತ್ತಿದ್ದಾರೆ. ಇದಕ್ಕೆ ಚಾಲಕರ ವರ್ತನೆ ಹಾಗೂ ರಸ್ತೆ ನಿಮಾರ್ಣದಲ್ಲಿನ ದೋಷ ಮುಖ್ಯ ಕಾರಣ. ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕಳೆದ ವರ್ಷ ದಾಖಲಾಗಿರುವ ಪ್ರಕರಣಗಳಲ್ಲಿ ವಾಹನಗಳ ಆರ್​ಸಿ ಹಾಗೂ ಪರಾವನಿಗೆ ರದ್ದುಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿಗಳಾದ ಎಸ್​.ಟಿ.ಸಿದ್ದಲಿಂಗಪ್ಪ, ಪರಮೇಶ್ವರ ಹೆಗಡೆ, ಉಡುಪಿ ಲಯನ್ಸ್​ ಕ್ಲಬ್​ ಅಧ್ಯಕ್ಷ ಲೂಯಿಸ್​ ಲೋಬೋ, ರೋಟರಿ ಕ್ಲಬ್ನ ರೋಡ್​ ಸೇಫ್ಟಿಯ ಜೈವಿಠಲ್​ ಉಪಸ್ಥಿತರಿದ್ದರು. ಉಡುಪಿ ಡಿವೈಎಸ್ಪಿ ಡಿ.ಟಿ.ಪ್ರಭು ಸ್ವಾಗತಿಸಿದರು. ಮಲ್ಪೆವೃತ್ತ ನಿರೀಕ್ಷಕ ಮಂಜುನಾಥ್​ ಎಂ. ಕಾರ್ಯಕ್ರಮ ನಿರೂಪಿಸಿದರು. ಮಣಿಪಾಲ ಪೊಲೀಸ್​ ನಿರೀಕ್ಷಕ ಟಿ.ವಿ.ದೇವರಾಜ್​ ವಂದಿಸಿದರು.