raste surakshatha karyakrama 
ಜಿಲ್ಲೆ

ಕುಂದಾಪುರದಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮ

Karthika K.S

ಕುಂದಾಪುರ: ಕುಂದಾಪುರ ರೋಟರಿ ಕ್ಲಬ್, ರೋಟರಿ ಕ್ಲಬ್ ದಕ್ಷಿಣ, ಮಿಡ್‌ಟೌನ್ ಮತ್ತು ಸನ್‌ರೈಸ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮ ನಗರದಲ್ಲಿ ಸೋಮವಾರ ನಡೆಯಿತು.

ಕುಂದಾಪುರ ಸಂಚಾರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೂತನ್ ಎಲ್‌ಇಡಿ ವಿಡಿಯೋ ಮೂಲಕ ರಸ್ತೆ ಸುರಕ್ಷತಾ ಕಾರ್ಯಕ್ರಮ ಅನಾವರಣಗೊಳಿಸಿದರು. ಬಳಿಕ ವಾತನಾಡಿ ಸಂಚಾರ ನಿಯಮಗಳನ್ನು ಪಾಲಿಸುವ, ಸುರಕ್ಷಿತವಾಗಿ ವಾಹನ ಚಲಾಯಿಸುವ ಮತ್ತು ಜೀವಗಳನ್ನು ಉಳಿಸುವ ಮಹತ್ವದ ಕುರಿತು ತಿಳಿಸಿದರು.

ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಟಕ ಮುಖ್ಯಸ್ಥ ಜಯಕರ ಶೆಟ್ಟಿ ರಸ್ತೆ ಸುರಕ್ಷತೆ ಕುರಿತ ಸ್ಟಿಕ್ಕರ್‌ಗಳನ್ನು ಬಿಡುಗಡೆ ವಾಡಿದರು. ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷ ಸಚಿನ್ ಸ್ವಾಗತಿಸಿದರು. ಮಿಡ್‌ಟೌನ್ ಅಧ್ಯಕ್ಷ ಸುನಿಲ್ ಶೆಟ್ಟಿ ಮತ್ತು ರೋಟರಿ ಕ್ಲಬ್ ಕುಂದಾಪುರ ಅಧ್ಯಕ್ಷ ನಾಗರಾಜ್ ಅತಿಥಿಗಳನ್ನು ಗೌರವಿಸಿದರು. ರೋಟರಿ ಕ್ಲಬ್ ಸನ್‌ರೈಸ್‌ನ ಅಧ್ಯಕ್ಷ ಗುರುರಾಜ್ ವಂದಿಸಿದರು.