ಬೆಳಗಟ್ಟಿಯಲ್ಲಿ ಪೊಲೀಸ್ ಠಾಣೆಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಕಾರ್ಯಕ್ರಮಲ್ಲಿ ಪೊಲೀಸರು ಬೈಕ್ ಸವಾರರಿಗೆ ಸಿಹಿ ಅರಿವು ಮೂಡಿಸಿದರು. ಪಿಎಸ್‌ಐ ಪ್ರಲ್ಹಾದ ನಾಯಕ, ಎಚ್‌ಸಿ ಮಲ್ಲಪ್ಪ, ಪಿಸಿ ಅಮರೇಗೌಡ, ಎಪಿಸಿ ಗಿರೀಗೌಡ, ಎಚ್‌ಜಿ ಹನುಮಂತ ಇತರರಿದ್ದರು. 
ಜಿಲ್ಲೆ

ರಸ್ತೆ ನಿಯಮ ಪಾಲಿಸಿ ಜೀವ ಉಳಿಸಿ

ಗಾಯತ್ರಿ ಮಾಲಿಪಾಟೀಲ್

ಅಳವಂಡಿ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದರೆ ಜೀವಕ್ಕೆ ರಕ್ಷಣೆ ಸಿಗಲಿದೆ ಎಂದು ಪಿಎಸ್‌ಐ ಪ್ರಲ್ಹಾದ್ ನಾಯಕ ಹೇಳಿದರು.

ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಅಳವಂಡಿ ಪೊಲೀಸ್ ಠಾಣೆಯಿಂದ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಸ್ತೆ ನಿಯಮಗಳನ್ನು ಪಾಲಿಸುವುದರಿಂದ ಪ್ರಾಣ ಹಾನಿ ತಪ್ಪಿಸಬಹುದು. ವಾಹನ ಚಾಲಕರು ಅಧಿಕೃತ ಪರವಾನಿಗೆ ಹೊಂದಿರಬೇಕು. ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡಬಾರದು. ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ನೀಡಬಾರದು. ಎಲ್ಲರೂ ರಸ್ತೆ ನಿಯಮಗಳನ್ನು ಪಾಲಿಸಿ ಅಮೂಲ್ಯ ಜೀವ ಉಳಿಸಿ ಎಂದರು.

ದ್ವಿಚಕ್ರ ವಾಹನ ಸವಾರರಿಗೆ ಸಿಹಿ ಹಂಚಿ ಹೆಲ್ಮೆಟ್ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು. ಎಚ್‌ಸಿ ಮಲ್ಲಪ್ಪ, ಪಿಸಿ ಅಮರೇಗೌಡ, ಎಪಿಸಿ ಗಿರಿಗೌಡ, ಎಚ್‌ಜಿ ಹನುಮಂತ ಇತರರಿದ್ದರು.