ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ರದ್ದುಗೊಳಿಸುವಂತೆ ಆಗ್ರಹಿಸಿ ಆರಂಭವಾಗಿರುವ ತುಮಕೂರು ಜಿಲ್ಲಾ ಬಂದ್ಗೆ ಮಂಗಳವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಯಂಪ್ರೇರಿತರಾಗಿ ಬಂದ್ನಲ್ಲಿ ಭಾಗವಹಿಸಿದ್ದು ಶಾಂತಿಯುತ ಬಂದ್ನಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಬಿ.ಸುರೇಶ್ಗೌಡ ನೇತೃತ್ವದಲ್ಲಿ ಯಶಸ್ವಿ ಬಂದ್ ಆಚರಿಸಲಾಯಿತು. ರಸ್ತೆ ತಡೆ ನಡೆಸಿದ ಸುರೇಶಗೌಡರನ್ನು ಪೊಲೀಸರು ವಶಕ್ಕೆ ಪಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ವೇಳೆ ಮಾತನಾಡಿದ ಸುರೇಶಗೌಡ, ಇಡೀ ಜಿಲ್ಲೆಯಜರ ನೀರಿನ ಹಕ್ಕಿನ ಹಿತಾಸಕ್ತಿಗೆ ವಿರುದ್ಧವಾದ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ತಕ್ಷಣ ಸರ್ಕಾರ ಕೈಬಿಡುವಂತೆ ಆಗ್ರಹಿಸಿದರು.
ಜನರು ತಮ್ಮ ಪಾಲಿನ ನೀರಿನ ಹಕ್ಕಿಗಾಗಿ ಬೀದಿಗೆ ಇಳಿದಿದ್ದಾರೆ. ಮೂಲ ಯೋಜನೆಯಲ್ಲಿ ಇಲ್ಲದೇ ಇದ್ದ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಒಂದು ಸಾವಿರ ಕೋಟಿ ರೂಪಾಯಿಗಳ ಯೋಜನೆ ಆಗಿದೆ. ಇದು ಇದ್ದಕ್ಕಿದ್ದಂತೆ ಏಕೆ ಹುಟ್ಟಿಕೊಂಡಿತು? ಇದು ದುಡ್ಡು ಹೊಡೆಯುವ ಜವಿರೋಧಿ ಯೋಜನ. ಕೆಲವರ ಹಿತಕ್ಕಾಗಿ ಹೇಮಾವತಿ ನದಿ ನೀರಿನ ಮೇಲಿನ ಹಕ್ಕನ್ನು ಬಿಟ್ಟುಕೊಡಲಾಗದು ಎಂದು ಗುಡುಗಿದರು.