ಜಿಲ್ಲೆ

ಹಾಳಾದ ರಸ್ತೆ ರವೀಂದ್ರ ನಗರದ ದುರವಸ್ಥೆ

Uttara Kannada - Subash Hegde

ಸಿದ್ದಾಪುರ: ಪಟ್ಟಣದ 1 ನೇ ವಾರ್ಡ್ ರವೀಂದ್ರ ನಗರ ರಸ್ತೆ ಸಂಪೂರ್ಣ ಹಾಳಾಗಿದ್ದು, ನಿವಾಸಿಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಶಿರಸಿ-ಸಿದ್ದಾಪುರ ಮುಖ್ಯ ರಸ್ತೆಯಿಂದ ಸುಮಾರು 1 ಕಿಮೀವರೆಗೆ ಡಾಂಬರು ಸಂಪೂರ್ಣವಾಗಿ ಕಿತ್ತು. ಹೋಗಿದೆ. ಕಲ್ಲುಗಳು ಎದ್ದಿದ್ದು, ಕಾರು, ಬೈಕ್ ಓಡಾಡಿದರೆ ಕಲ್ಲು ಪಕ್ಕದ ರಸ್ತೆಗಳಿಗೆ ಸಿಡಿಯುತ್ತದೆ. ಧೂಳು ಎದ್ದು ಹಾರುತ್ತದೆ. ಸಾಕಷ್ಟು ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಈ ಬಗ್ಗೆ ವಾರ್ಡ್ ಸದಸ್ಯರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬುದು ವಾರ್ಡ್ ನಿವಾಸಿಗಳ ದೂರು.

ಪಟ್ಟಣ ಪಂಚಾಯಿತಿ ಅಧ್ಯಕ್ಷರ ಮನೆಯ ಪಕ್ಕದಲ್ಲೇ ಈ ದುಸ್ಥಿತಿ ಇದೆ. ಸುಮಾರು 50 ಕ್ಕೂ ಅಽಕ ಮನೆಗಳಿವೆ. ಮಾತ್ರವಲ್ಲ ರಸ್ತೆ ಮುಂದೆ ಹಲವು ಪ್ರದೇಶಗಳಿಗೆ ಸಂಪರ್ಕ ನೀಡುವುದರಿಂದ ನಿತ್ಯ ನೂರಾರು ವಾಹನಗಳು ಓಡಾಟ ನಡೆಸುತ್ತವೆ. ಆದರೆ, ಸಂಚಾರ ದುಸ್ತರವಾಗಿದೆ. ಶೀಘ್ರದಲ್ಲಿ ರಸ್ತೆಯನ್ನು ರಿಪೇರಿ ಮಾಡಬೇಕು ಎಂಬುದು ವಾರ್ಡ್ ನಿವಾಸಿಗಳ ಒತ್ತಾಯವಾಗಿದೆ.