ಪುತ್ತೂರು: ವಾಹನಗಳಿಗೆ ಹಾನಿಯುಂಟು ಮಾಡುತ್ತಿದ್ದ ಸಂಪರ್ಕ ರಸ್ತೆಯ ದುರಸ್ತಿ ಕಾರ್ಯವನ್ನು ಸ್ಥಳೀಯಾಡಳಿತ ಮಾಡುವ ಮೂಲಕ ಸವಾರರು ನಿಟ್ಟುಸಿರು ಬಿಡುವಂತಾಗಿದೆ. ಮಳೆಗಾಲದಲ್ಲಿ ನೀರು ಹೋಗಲು ಸಮರ್ಪಕ ಹಾದಿಯನ್ನು ರಸ್ತೆಯ ಬದಿಯಲ್ಲಿ ಮಾಡಿಕೊಡುವಲ್ಲಿ ಪರಿಣತ ವರ್ಗ ವಿಫಲವಾಗಿದ್ದು, ಅಳವಡಿಸಿದ ಇಂಟರ್‌ಲಾಕ್ ಉಳಿಯಬಹುದಾ ಎಂಬ ಪ್ರಶ್ನೆ ಮೂಡುವಂತಾಗಿದೆ.
ತೆಂಕಿಲದಿಂದ ಇಂದಿರಾ ಕ್ಯಾಂಟೀನ್ ಮೂಲಕವಾಗಿ ಪುರಭವನಕ್ಕೆ ಹೋಗುವ ದಾರಿಯಲ್ಲಿ ಕಳೆದ ಕೆಲವು ಸಮಯದಿಂದ ಸಮಸ್ಯೆ ಎದುರಾಗಿತ್ತು. ಕಾಂಕ್ರೀಟ್ ಹಾಕುವ ಸಮಯ ನೆಲ ಹಾಗೂ ರಸ್ತೆ ನಡುವೆ ಸಾಕಷ್ಟು ಅಂತರವನ್ನು ಬಿಟ್ಟು ನಿತ್ಯ ಐದಕ್ಕೂ ಅಽಕ ವಾಹನಗಳು ಬಾಕಿಯಾಗುತ್ತಿದ್ದವು. ಅಽಕಾರಿಗಳ ನಿರ್ಲಕ್ಷ್ಯದಿಂದ ಜನರು ಹಿಡಿ ಶಾಪ ಹಾಕುವಂತಾಗಿತ್ತು.
ಪೊಲೀಸ್ ವಾಹನ ಬಾಕಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡು ನಗರಸಭೆಯ ಅಽಕಾರಿ ವರ್ಗ ತರಾತುರಿಯಲ್ಲಿ ಇಂಟರ್‌ಲಾಕ್ ಅಳವಡಿಸುವ ಕಾರ್ಯವನ್ನು ಮಾಡಿ ಜನರ ಸಮಸ್ಯೆಗೆ ಮುಕ್ತಿ ನೀಡಿದೆ. ಆದರೆ ಚರಂಡಿ ವ್ಯವಸ್ಥೆಯನ್ನು ಕಲ್ಪಿಸದಿರುವುದು ಕಾಮಗಾರಿ ಎಷ್ಟು ಸಮಯ ಬಾಳ್ವಿಕೆ ಬರಬಹುದೆಂಬ ಪ್ರಶ್ನೆಯನ್ನು ಮೂಡಿಸುವಂತೆ ಮಾಡಿದೆ.
ಕಾಂಕ್ರೀಟ್ ರಸ್ತೆಯ ಕಾಮಗಾರಿಯನ್ನು ಪೂರ್ಣ ಮಾಡದ ಬಗ್ಗೆ ಫೆ.೨೭ಕ್ಕೆ ನಿರ್ವಹಣೆಯಿಲ್ಲದ ಕಾಂಕ್ರೀಟ್ ರಸ್ತೆ ಎಂಬ ವರದಿ ಹಾಗೂ ಮಾ.೧೩ರಂದು ರಸ್ತೆಯಿಂದ ಜಾರಿದ ೧೧೨ ವಾಹನ ಎಂಬ ವರದಿಯನ್ನು ವಿಜಯವಾಣಿ ಪ್ರಕಟಿಸಿತ್ತು. ಇದಾಗುತ್ತಿದ್ದಂತೆ ತ್ವರಿತವಾಗಿ ನಗರ ಸಭೆ ಇಂಟರ್‌ಲಾಕ್ ಅಳವಡಿಸುವ ಕಾರ್ಯ ಮಾಡಿದೆ.
ಹಿಂದೆ ಅಳವಡಿಸಿದ್ದು ಹೋಗಿತ್ತು?
ತೆಂಕಿಲದಿಂದ ಸೈನಿಕ ಭವನ ಸಂಪರ್ಕ ರಸ್ತೆಯನ್ನು ತಲುಪುವ ರಸ್ತೆಯ ಬದಿಗೆ ಇಂಟರ್‌ಲಾಕ್ ಅಳವಡಿಸಿದ್ದು, ನೀರಿನ ಹರಿವಿಗೆ ವ್ಯವಸ್ಥೆಯಿರಲಿಲ್ಲ. ಇಳಿಜಾರು ಪ್ರದೇಶದಲ್ಲಿ ಮಳೆಗಾಲದ ನೀರು ಹರಿದು ಇಂಟರ್‌ಲಾಕ್ ಅಡಿಯಲ್ಲಿದ್ದ ಮಣ್ಣನ್ನು ಕೊಚ್ಚಿಕೊಂಡು ಹೋಗಿ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಗುಂಡಿ ನಿರ್ಮಾಣವಾಗಿತ್ತು. ಈಗ ಹೊಸದಾಗಿ ಅಳವಡಿಸಿದ ಇಂಟರ್‌ಲಾಕ್‌ನಲ್ಲೂ ನೀರು ಹರಿಯಲು ವ್ಯವಸ್ಥೆಯಿಲ್ಲದಿರುವುದು ಮಳೆಗಾಲದಲ್ಲಿ ಉಳಿಯಬಹುದಾ ಎಂಬ ಪ್ರಶ್ನೆ ಮೂಡಿಸಿದೆ.
ಹಲವು ವಾಹನಗಳಿಗೆ ಸಮಸ್ಯೆ
ರಸ್ತೆಯ ಬದಿಯಲ್ಲಾದ ಗುಂಡಿಯಲ್ಲಿ ಹಲವು ವಾಹನಗಳು ಸಿಲುಕಿ ಸಮಸ್ಯೆಯಾಗಿತ್ತು. ಊರಿನಲ್ಲಾಗುವ ಸಮಸ್ಯೆಗಳನ್ನು ಬಗೆಹರಿಸಲು ಓಡಾಡುವ ೧೧೨ ವಾಹನವೂ ಕೊನೆಗೆ ಗುಂಡಿಯಲ್ಲಿ ಸಿಲುಕುವ ಸ್ಥಿತಿ ನಿರ್ಮಾಣವಾಗಿತ್ತು. ಅವರೂ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳದೆ ಹಾಗೇ ಬಿಟ್ಟು ಹೋಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿತ್ತು.
ರಸ್ತೆಗಳನ್ನು ಅಭಿವೃದ್ಧಿಪಡಿಸುವ ಅಽಕಾರಿಗಳು ಆನ್‌ಲೈನ್ ಮೂಲಕ ಶಿಕ್ಷಣ ಪಡೆದಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಮಳೆ ನೀರು ಹರಿಯಲು ಬೇಕಾದ ವ್ಯವಸ್ಥೆಯನ್ನು ಕಲ್ಪಿಸದೆ ರಸ್ತೆಗಳನ್ನು ನಿರ್ಮಾಣ ಮಾಡಿದರೆ ಉಳಿಯಲು ಸಾಧ್ಯವೇ? ತಂತ್ರಜ್ಞಾನಗಳು ಮುಂದುವರಿದ್ದರೂ, ಅದನ್ನು ಬಳಸಿ ಕಾಮಗಾರಿಯನ್ನು ನಡೆಸಿ ದೀರ್ಘ ಬಾಳ್ವಿಕೆಯ ದೃಷ್ಟಿಯನ್ನು ಯಾವೊಬ್ಬ ಅಽಕಾರಿಯೂ ಮಾಡುತ್ತಿಲ್ಲ. ಮಾಡಿದ ಕಾಮಗಾರಿಗಳನ್ನೇ ಹಲವು ಬಾರಿ ಮಾಡುವ ಮೂಲಕ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ.
| ಪ್ರದೀಪ್, ಉದ್ಯಮಿ