ವಿಜಯವಾಣಿ ಸುದ್ದಿಜಾಲ ಮೂಲ್ಕಿ
ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆವರೆಗೆ ರಸ್ತೆ ಸರಿಯಾಗಿದ್ದರೂ ಟೋಲ್ ಬಳಿಕದ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಆವೃತವಾಗಿದೆ. ನಡು ರಸ್ತೆ ಹಾಗೂ ರಸ್ತೆ ಬದಿಯಲ್ಲಿರುವ ಗುಂಡಿಗಳು ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ.
ಗುಂಡಿಗಳಿಂದಾಗಿ ಏಕಾಏಕಿ ಬ್ರೇಕ್ ಹಾಕಿದಾಗ ದ್ವಿಚಕ್ರ ವಾಹನ ಮಗುಚಿ ಬಿದ್ದರೆ ಹಿಂದೆ ಅತಿ ವೇಗವಾಗಿ ಬರುವ ಬಸ್, ಲಾರಿಗಳ ಅಡಿಗೆ ಬೀಳುವ ಅಪಾಯ ಇದೆ. ಈಗಾಗಲೇ ಗುಂಡಿಗೆ ಬಿದ್ದು ಹಲವರು ಮೂಳೆ ಮುರಿದುಕೊಂಡಿದ್ದಾರೆ. ಮೂಲ್ಕಿ ಕಡೆಯಿಂದ ನೂರಾರು ದ್ವಿಚಕ್ರ ವಾಹನ ಸವಾರರು ಮಂಗಳೂರು ಕಡೆಗೆ ಪ್ರಯಾಣಿಸುತ್ತಾರೆ. ಉಡುಪಿ, ಕುಂದಾಪುರ ಕಡೆಯಿಂದಲೂ ಜನರು ಪ್ರಯಾಣಿಸುತ್ತಾರೆ. ಹೀಗಾಗಿ ಹೆದ್ದಾರಿ ಇಲಾಖೆ ರಸ್ತೆ ನಿರ್ವಹಣೆ ವಾಡುವ ಅಗತ್ಯವಿದ್ದು, ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ.
ಎನ್‌ಐಟಿಕೆ ಟೋಲ್ ಮುಂದುವರಿದ ಕೂಡಲೇ ಗುಂಡಿಗಳ ದರ್ಶನ ಆರಂಭ. ಬಹಳಷ್ಟು ದಿನಗಳಿಂದ ಮಂಗಳೂರುವರೆಗೆ ರಸ್ತೆ ರಿಪೇರಿಯಾಗಿಲ್ಲ. ಹೊಂಡ ತಪ್ಪಿಸಿ ಹೋಗುವುದು ಬಹಳ ಕಷ್ಟಕರ. ರೇಖಾ ರಮೇಶ್ ಹಳೆಯಂಗಡಿ, ದ್ವಿಚಕ್ರ ವಾಹನ ಚಾಲಕಿ https://www.vijayavani.net/free-health-checkup-camp-9 https://www.vijayavani.net/blood-donation-medical-camp-at-pilar