ಜಿಲ್ಲೆ

ಕುಪ್ಪೆಪದವು-ನಡುಪಲ್ಲ-ಅಂಬೆಲೊಟ್ಟು ಸಂಪರ್ಕ ಸರಿಪಡಿಸಲು ಆಗ್ರಹ

Dakshina Kannada

ಗುರುಪುರ: ಕುಪ್ಪೆಪದವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪೆಪದವು-ನಡುಪಲ್ಲ ಮೂಲಕ ಅಂಬೆಲೊಟ್ಟುವಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಕಾಲುದಾರಿ ದುರಸ್ತಿ ಮಾಡುವಂತೆ ಜನ ಪಂಚಾಯಿತಿ ಆಡಳಿತವನ್ನು ಆಗ್ರಹಿಸಿದ್ದಾರೆ.

ಮಳೆಗಾಲದಲ್ಲಿ ಇಲ್ಲಿ ಕೆಸರು ನೀರು ಮತ್ತು ಮಣ್ಣು ತುಂಬಿ ನಡೆದಾಡುವುದು ಕಷ್ಟವಾಗುತ್ತದೆ. ಸುಮಾರು 45ರಷ್ಟು ಮನೆಯವರು ಈ ಅಗಲ ಕಿರಿದಾದ ಹಾಗೂ ಎರಡೂ ಕಡೆ ಆವರಣ ಗೋಡೆ ಇರುವ ಕಾಲುದಾರಿಯಲ್ಲಿ ನಿತ್ಯ ಸಂಚರಿಸುತ್ತಾರೆ. ಖಾಸಗಿ ಜಾಗದಲ್ಲಿ ಈ ಕಾಲುದಾರಿ ಇದ್ದರೂ, ಜಾಗದ ಮಾಲೀಕರು ಸಾರ್ವಜನಿಕರಿಗೆ ಬಿಟ್ಟುಕೊಟ್ಟಿದ್ದಾರೆ.

ಇದನ್ನು ದುರಸ್ತಿ ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಈ ಭಾಗದ ಜನ ದೂರಿದ್ದಾರೆ. ಖಾಸಗಿಯವರು ಬಿಟ್ಟು ಕೊಟ್ಟ ಜಾಗದಲ್ಲಿ ದುರಸ್ತಿಗೆ ಆಕ್ಷೇಪವಿರದು. ದುರಸ್ತಿ ಮಾಡಲು ಪಂಚಾಯಿತಿ ಇಚ್ಛಾಶಕ್ತಿ ಹೊಂದಿದಂತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಕೆಲವರು ಕಾಲುದಾರಿಯ ಎರಡೂ ಕಡೆ ತ್ಯಾಜ್ಯ ಎಸೆಯುತ್ತಾರೆ. ಮಳೆಗಾಲದಲ್ಲಿ ಇಲ್ಲಿ ಕೆಸರು ನೀರಿನ ಸಹಿತ ಕೊಳೆತ ಸೊತ್ತುಗಳ ದುರ್ನಾತ ಬೀರುತ್ತದೆ. ಶೀಘ್ರ ದುರಸ್ತಿ ಮಾಡಲು ಪಂಚಾಯಿತಿ ಕ್ರಮ ಕೈಗೊಳ್ಳಬೇಕು.

-ಬಶೀರ್ ಹೊಸಮನೆ, ನಡುಪಲ್ಲ ನಿವಾಸಿ

ಕುಪ್ಪೆಪದವು ಪೇಟೆ ಸಂಪರ್ಕಿಸುವ ಈ ಕಾಲುದಾರಿ ದುರಸ್ತಿ ಮಾಡುವಂತೆ ಕೋರಿ ಪಂಚಾಯಿತಿಗೆ ಹಲವು ಬಾರಿ ಮನವಿ ನೀಡಿದ್ದೇವೆ. ಈ ಭಾಗದ ನಾಗರಿಕರ ಮೂಲ ಅವಶ್ಯಕತೆ ಪೂರೈಸಲು, ಪಂಚಾಯಿತಿ ಆಡಳಿತ ಖಾಸಗಿಯವರೊಂದಿಗೆ ಮಾತುಕತೆ ನಡೆಸುವಂಥ ಕನಿಷ್ಠ ಕ್ರಮವನ್ನೂ ಕೈಗೊಂಡಿಲ್ಲ.

-ಹರಿಶ್ಚಂದ್ರ ಕೆ. ನಡುಪಲ್ಲ ನಿವಾಸಿ