ಜಿಲ್ಲೆ

ಕಾಮಗಾರಿ ಅಪೂರ್ಣ: ವಾಹನ ಸವಾರರು‌ ಪರದಾಟ!

ಮಂಜುನಾಥ ಕೋಳಿಗುಡ್ಡ

ವಿಜಯವಾಣಿ ಸುದ್ದಿಜಾಲ ಎಂ.ಕೆ‌.ಹುಬ್ಬಳ್ಳಿ

ಕಾಮಗಾರಿ ವಿಳಂಬ ವಾಹನಗಳೆರಡು ನಡುರಸ್ತೆಯಲ್ಲಿ ಸಿಲುಕಿ, ರಾತ್ರಿಯಿಂದ ರಾಜ್ಯಹೆದ್ದಾರಿಯಲ್ಲಿ ಸಂಚಾರ ಸ್ಥಗೀತಗೊಂಡ ಘಟನೆ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಬಳಿಯ ಬೈಲಹೊಂಗಲ ರಸ್ತೆಯಲ್ಲಿ ನಡೆದಿದೆ.
ಹೊಳಿನಾಗಲಾಪೂರ ಗ್ರಾಮದ ಕೆರೆಗೆ ಮಲಪ್ರಭಾ ನದಿಯಿಂದ ನೀರು ಸಾಗಿಸಲು ಪೈಪ್ ಲೈನ್ ಸಾಗಿಸುವ ಉದ್ದೇಶದಿಂದ ಇತ್ತಿಚೆಗೆ ರಸ್ತೆಯ ಅಡ್ಡಲಾಗಿ ಗುಂಡಿ ಅಗೆಯಲಾಗಿತ್ತು.  ಆದರೆ, ಕಾಮಗಾರಿ ಅಪೂರ್ಣವಾಗಿದ್ದರಿಂದ ವಾಹನ ಸವಾರರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಗುಂಡಿ ಮೇಲ್ಭಾಗದಲ್ಲಿ ಕಾಂಕ್ರೀಟ್ ಹಾಕಿ ತೆಪ್ಪೆ ಹಚ್ಚುವ ಕೆಲಸ ಮಾಡಿದ್ದ.
ಈದೀಗ ಅದೇ ಗುಂಡಿಯಲ್ಲಿ ನಿನ್ನೆ ರಾತ್ರಿ ವಾಹನಗಳೆರಡು ಸಿಲುಕಿಕೊಂಡು ಸಮಸ್ಯೆ ಸೃಷ್ಟಿಸಿವೆ.
ಈ ಮಾರ್ಗದ ಸಂಚಾರ ಸಂಪೂರ್ಣ ಸ್ಥಗೀತಗೊಂಡಿರುವುದರಿಂದ ಬಸ್ ಸೇರಿ ಯಾವುದೇ ವಾಹನಗಳು ಸಂಚರಿಸಲಾಗುತ್ತಿಲ್ಲ. ಪರಿಣಾಮ ಈ ಮಾರ್ಗದ ಅನೇಕ ಗ್ರಾಮಗಳ ಪ್ರಯಾಣಿಕರು ವಾಹನಗಳಿಲ್ಲದೇ ಪರದಾಡುವಂತಾಗಿದೆ. ಅನಿವಾರ್ಯವಾಗಿ 20 ಕಿ.ಮೀ ಸುತ್ತುವರಿದು ಸಂಚರಿಸಬೇಕಾದ ಅನಿವಾರ್ಯತೆ ಚಾಲಕರಿಗೆ ಎದುರಾಗಿದೆ.
ನಿರ್ಲಕ್ಷ್ಯ ತೋರಿದ ಪೈಪ್ ಲೈಲ್ ಅಳವಡಿಕೆ ಗುತ್ತಿಗೆದಾರನ ವಿರುದ್ಧ ಸಾರ್ವಜನಿಕರು, ಪ್ರಯಾಣಿಕರು ಹಾಗೂ ವಾಹನ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.