ಕುಕನೂರಿನ ಮಂಗಳೂರು-ಕವಲೂರು ರಸ್ತೆ ಸುಧಾರಣೆ ಕಾಮಗಾರಿಗೆ ಅಂಗ ಕಾರ್ಯವಾದ ಗುದ್ನೇಪ್ಪನಮಠ ರಸ್ತೆ ಕಾಮಗಾರಿಗೆ ಶುಕ್ರವಾರ ಶಾಸಕ ಹಾಲಪ್ಪ ಆಚಾರ್ ಚಾಲನೆ ನೀಡಿದರು. 
ಜಿಲ್ಲೆ

ರಸ್ತೆ ಸುಧಾರಣೆ ಕಾಮಗಾರಿ ಅಚ್ಚುಕಟ್ಟಾಗಿ ನಿರ್ವಹಿಸಿ - ಶಾಸಕ ಹಾಲಪ್ಪ ಆಚಾರ್ ಸೂಚನೆ

Koppal

ಕುಕನೂರು: ಪಟ್ಟಣದ ಗುದ್ನೇಪ್ಪನಮಠದ ಬಳಿಯ ಮಂಗಳೂರು-ಕವಲೂರು ರಸ್ತೆಯನ್ನು 4.80 ಕೋಟಿ ರೂ. ವೆಚ್ಚದ ಸುಧಾರಣೆ ಮಾಡಲಾಗುತ್ತಿದ್ದು, ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಇಂಜಿನಿಯರ್‌ಗಳಿಗೆ ಶಾಸಕ ಹಾಲಪ್ಪ ಆಚಾರ್ ಸೂಚಿಸಿದರು.

ರಸ್ತೆ ಸುಧಾರಣೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಗುದ್ನೇಪ್ಪನಮಠದಲ್ಲಿ ರಸ್ತೆಯ ಎರಡು ಬದಿ ಚರಂಡಿ ನಿರ್ಮಾಣ ಮಾಡಲಾಗುವುದು. 18 ಅಡಿ ಇದ್ದ ರಸ್ತೆಯನ್ನು 36 ಅಡಿ ವಿಸ್ತರಣೆ ಮಾಡಲಾಗುವುದು. ಡಾಂಬರೀಕರಣ ವೇಳೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಚರಂಡಿ ಎರಡು ಬದಿ ದೊಡ್ಡದಾದ ಬೀದಿ ದೀಪಗಳ ಅಳವಡಿಕೆ ಆಗುತ್ತದೆ. ಶ್ರೀ ಗುದ್ನೇಪ್ಪನಮಠ ಧಾರ್ಮಿಕ ಕ್ಷೇತ್ರವಾಗಿದ್ದು, ಜಾತ್ರೆ ವೇಳೆ ಸಹಸ್ರ ಭಕ್ತರು ಆಗಮಿಸುತ್ತಾರೆ. ಗ್ರಾಮಸ್ಥರು ಮುಂದೆ ನಿಂತು ರಸ್ತೆ ಸುಧಾರಣೆ ಕಾಮಗಾರಿಗೆ ಸಹಕರಿಸಬೇಕು ಎಂದರು.

ಎಡಬ್ಲೂಡಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತರಾಜ್ ಮಾತನಾಡಿ, ಕಾಮಗಾರಿ ವಿವರ ನೀಡಿದರು. ಕಾಮಗಾರಿ ಕೂಡಲೇ ಆರಂಭವಾಗುತ್ತಿದ್ದು, ಮಾದರಿ ಕಾಮಗಾರಿ ಮಾಡುವುದಾಗಿ ತಿಳಿಸಿದರು. ಪಿಡಬ್ಲೂಡಿ ಸಹಾಯಕ ಇಂಜಿನಿಯರ್ ಶರಣಬಸಪ್ಪ, ಪಪಂ ಮುಖ್ಯಾಧಿಕಾರಿ ಶ್ರೀಶೈಲಗೌಡ, ಪಪಂ ಸದಸ್ಯರಾದ ನೇತ್ರಾವತಿ ಬಂಡಿ, ಬಸವರಾಜ ಅಡವಿ, ಮೃತ್ಯುಂಜಯ ಕಂಪ್ಲಿ, ಶಂಭು ಜೋಳದ, ಗುತ್ತಿಗೆದಾರ ಎಸ್.ಎಸ್ ಪಾಟೀಲ್, ಪ್ರಮುಖರಾದ ಮಾರುತಿ ಗಾವರಾಳ ಇತರರಿದ್ದರು.