ಜಿಲ್ಲೆ

ರಸ್ತೆ ಸುಧಾರಣೆಯಿಂದ ರೈತರಿಗೆ ಅನುಕೂಲ

ಪ್ರಶಾಂತ ಹೂಗಾರ

ರಾಯಬಾಗ: ಗ್ರಾಮೀಣ ಭಾಗದ ರಸ್ತೆ ಸುಧಾರಣೆಯಿಂದ ರೈತರಿಗೆ, ಪ್ರಯಾಣಿಕರಿಗೆ ತ್ವರಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಜಲಾಲಪುರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 60 ಲಕ್ಷ ರೂ. ಅನುದಾನದಲ್ಲಿ ಜಲಾಲಪುರ-ರಾಯಬಾಗ ರಸ್ತೆ ಡಾಂಬರೀಕರಣ ಹಾಗೂ ಚಿಂಚಲಿ ರೈಲ್ವೆ ಸ್ಟೇಷನ್ ಹತ್ತಿರ 1 ಕೋಟಿ ರೂ. ಅನುದಾನದಲ್ಲಿ ರೈಲ್ವೆ ಸ್ಟೇಷನ್‌ದಿಂದ ರೈಲ್ವೆ ಗೇಟ್‌ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಮತಕ್ಷೇತ್ರದ ಎಲ್ಲ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ಗುತ್ತಿಗೆದಾರರು ಗುಣಮಟ್ಟದಿಂದ ರಸ್ತೆ ಕಾಮಗಾರಿ ಮಾಡಬೇಕೆಂದರು.

ಎಇಇ ಆರ್.ಬಿ.ಮನವಡ್ಡರ, ಸದಾಶಿವ ಘೋರ್ಪಡೆ, ರಾಜು ಜಾಧವ, ಮೌಲಾನಾ ನದ್ಾ, ಅಂಕುಶ ಜಾಧವ, ಸುಭಾಷ ಕೋರೆ, ನಾಮದೇವ ಕಾಂಬಳೆ, ಬಸು ಅವ್ವನ್ನವರ, ರಾಜು ಮುರಚಟ್ಟಿ, ರಮೇಶ ಹಾರೂಗೇರಿ, ಲಕ್ಷ್ಮಣ ತುಳಸಿಗೇರಿ, ಮಲ್ಲು ಜಗದಾಳೆ, ಕಿರಣ ಖನದಾಳೆ, ವಿನಾಯಕ ಪವಾರ, ಕುಮಾರ ಖೋತ, ಅಜಿತ್ ಈರಗಾರ, ಫಿರೋಜ ಮಕಾಂದಾರ, ಮಹೇಂದ್ರ ಗಾಣಿಗೇರ,

ರಾಜು ಪೋಳ, ಅನಿಲ ಮೈಶಾಳೆ, ಪ್ರಕಾಶ ತೇರದಾಳ, ಮಲ್ಲಪ್ಪ ಕಮತೆ ಇತರರಿದ್ದರು.