ಸಿಂಧನೂರಿನ ಗಾಂಧಿ ವೃತ್ತದಿಂದ 2ಕಿಮೀ ಗಂಗಾವತಿ ಮಾರ್ಗದ ರಸ್ತೆ ನವೀಕರಣಕ್ಕೆ ಬುಧವಾರ ಶಾಸಕ ಹಂಪನಗೌಡ ಬಾದರ್ಲಿ ಭೂಮಿ ಪೂಜೆ ನೆರವೇರಿಸಿದರು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ನಗರಸಭೆ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾಟೀಲ್, ಸೈಯ್ಯದ್ ಜಾಫರ ಅಲಿ ಜಾಹಗೀರದಾರ, ಮಾಜಿ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸದಸ್ಯರಾದ ಶೇಖರಪ್ಪ ಗಿಣಿವಾರ, ಶಬ್ಬೀರ್ ಅಹ್ಮದ್ ಇದ್ದರು. 
ಜಿಲ್ಲೆ

ರಸ್ತೆ ನವೀಕರಣಕ್ಕೆ ಭೂಮಿ ಪೂಜೆ: ಶಾಸಕ ಹಂಪನಗೌಡ ಬಾದರ್ಲಿ ಚಾಲನೆ

Gangavati - Desk - Veeresh S Ullagaddi

ಸಿಂಧನೂರು: ಕೆಆರ್‌ಡಿಸಿಎಲ್ ವ್ಯಾಪ್ತಿಗೆ ಬರುವ ನಗರದ ಗಾಂಧಿ ವೃತ್ತದಿಂದ 2 ಕಿಮೀ ಗಂಗಾವತಿ ಮಾರ್ಗದ ರಸ್ತೆ ನವೀಕರಣಕ್ಕೆ ಬುಧವಾರ ಶಾಸಕ ಹಂಪನಗೌಡ ಬಾದರ್ಲಿ ಭೂಮಿ ಪೂಜೆ ನೆರವೇರಿಸಿದರು.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗಾಂಧಿ ವೃತ್ತದಿಂದ ಹಳ್ಳದವರೆಗೆ ರಸ್ತೆ ಕೆಟ್ಟು ಹೋಗಿತ್ತು. ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ನಿರ್ವಹಣೆಗೂ ಅನುದಾನ ನೀಡಿದ್ದರಿಂದ ಮರು ಡಾಂಬಾರೀಕರಣ ಮಾಡುವಂತೆ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ರಸ್ತೆಯ ಎರಡೂ ಬದಿ ಡಾಂಬಾರೀಕರಣ ಮಾಡಲಾಗುವುದು. ಜತೆಗೆ ಗಾಂಧಿ ವೃತ್ತದಿಂದ ಕುಷ್ಟಗಿ ರಸ್ತೆಯೂ ಅಲ್ಲಲ್ಲಿ ಕೆಟ್ಟು ಹೋಗಿದ್ದು, ಅದರ ಅಭಿವೃದ್ಧಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.


ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ನಗರಸಭೆ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾಟೀಲ್, ಸೈಯ್ಯದ್ ಜಾಫರ ಅಲಿ ಜಾಹಗೀರದಾರ, ಮಾಜಿ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸದಸ್ಯರಾದ ಶೇಖರಪ್ಪ ಗಿಣಿವಾರ, ಶಬ್ಬೀರ್ ಅಹ್ಮದ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್, ಮುಖಂಡರಾದ ವೆಂಕೋಬಣ್ಣ ಬಂಗಿ, ಚಂದ್ರಶೇಖರಗೌಡ, ಪ್ರಭುರಾಜ, ಪ್ರೋಜೆಕ್ಟ್ ವ್ಯವಸ್ಥಾಪಕ ನರೇಶ್ವರ ರೆಡ್ಡಿ ಇದ್ದರು.