ಜಿಲ್ಲೆ

ರಸ್ತೆಯಲ್ಲಿ ಬಿದ್ದಿದ್ದ ಗುಂಡಿ ತಪ್ಪಿಸಲು ಹೋಗಿ ಅಪಘಾತ

Haveri - Kariyappa Aralikatti

ಹಾನಗಲ್ಲ: ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ಬೈಕ್​ನಿಂದ ಬಿದ್ದು ಸವಾರರು ಗಾಯಗೊಂಡ ಟನೆ ತಾಲೂಕಿನ ನೆಗವಣಿಗ ಗ್ರಾಮದ ಬಳಿ ನಡೆದಿದೆ.

ಮಹದೇವಪ್ಪ (40) ಮತ್ತು ಕಲಾವತಿ (30) ಗಾಯಗೊಂಡವರು.

ಇವರು ಬೈಕ್​ನಲ್ಲಿ ತೆರಳುತ್ತಿದ್ದ ಸಮಯದಲ್ಲಿ ಗ್ರಾಮದ ಬಳಿಯಿರುವ ಫಾಮ್​ರ್ ಹೌಸ್​ ಬಳಿ ರಸ್ತೆಯ ಮಧ್ಯೆಭಾಗದಲ್ಲಿ ಬಿದಿದ್ದ ಗುಂಡಿ ತಪ್ಪಿಸಲು ಹೋಗಿ ಬಿದ್ದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.