ನುಗ್ಗೇಹಳ್ಳಿ ಹೋಬಳಿ ಬದ್ದಿಕೆರೆ ಗ್ರಾಮದಲ್ಲಿ 4 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು. ಮಂಜೇಗೌಡ, ವೆಂಕಟೇಗೌಡ, ಅಶೋಕ್, ಜಯರಾಮ್, ಪಾರ್ಥ ಸಾರಥಿ, ರಾಮು, ವಿವೇಕ್, ಜನನಾಯಕ, ಸಂಪತ್ ಕುಮಾರ್, ಕಿಟ್ಟಿ ಇತರರು ಇದ್ದರು. 
ಜಿಲ್ಲೆ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ವಸಂತಕುಮಾರ್ ಬಿ

ನುಗ್ಗೇಹಳ್ಳಿ: ಹೋಬಳಿಯ ಬುದ್ದಿಕೆರೆ ಗ್ರಾಮದಲ್ಲಿ 4 ಕೋಟಿ ರೂ. ವೆಚ್ಚದ ಸಿಮೆಂಟ್ ಹಾಗೂ ಡಾಂಬರ್ ರಸ್ತೆ ಕಾಮಗಾರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

600 ಮೀಟರ್ ಕಾಂಕ್ರೀಟ್ ರಸ್ತೆ 1500 ಮೀ. ಡಾಂಬರ್ ರಸ್ತೆಯನ್ನು ಹನುಮಂತಪುರ ಹಾಗೂ ಬದ್ದಿಕೆರೆಗೆ ನಡುವೆ ನಿರ್ಮಿಸಲಾಗುತ್ತಿದೆ. ಬದ್ದಿಕೆರೆ ಗ್ರಾಮದ ಕೆರೆಗೆ 5 ಲಕ್ಷ ರೂ. ವೆಚ್ಚದಲ್ಲಿ ಜಿಪಂನಿಂದ ಪೈಪ್‌ಲೈನ್ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಶಾಸಕರನನು ಆಗ್ರಹಿಸಿದರು. ಗ್ರಾಮದಲ್ಲಿ ಶಾಂತಿ ನೆಮ್ಮದಿ ಕಾಪಾಡಲು ಇನ್ನು ಮುಂದೆ ಯಾರೂ ಮದ್ಯ ಮಾರಬಾರದು. ಈ ಸಂಬಂಧ ಬಿಗಿ ಕಾನೂನು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಮಂಜೇಗೌಡ, ಹೇಮಾವತಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಜಯರಾಮ್, ಎಲ್‌ವಿ ಕನ್ಸ್‌ಟ್ರಕ್ಷನ್‌ನ ವೆಂಕಟೇಗೌಡ, ಇಂಜಿನಿಯರ್ ನಂಜುಂಡಯ್ಯ, ಮುಖಂಡರಾದ ಕಾವಲು ಹೊಸೂರು ನಂಜಪ್ಪ, ಅಶೋಕ್, ಚಿನ್ನೇನಹಳ್ಳಿ ರಾಮು, ಮಂಜುನಾಥ್, ಪಾರ್ಥ ಸಾರಥಿ, ಸಂಪತ್ ಕುಮಾರ್, ವಿವೇಕ್, ದೇವರಾಜ್, ಜನನಾಯಕ, ಕಿಟ್ಟಿ, ಶೇಖರ್ ಇತರರಿದ್ದರು.